ಕೆಲವೊಮ್ಮೆ ರಾತ್ರಿ ಮಾಡಿದ ರಾಗಿ ಮುದ್ದೆಗಳು ಮಿಕ್ಕಿ ಹೋಗುತ್ತೆ.. ಆದ್ರೆ ಅದನ್ನ ವ್ಯರ್ಥ ಮಾಡೋದಕ್ಕಿಂತ ಅದರಿಂದ ರಾಗಿ ಅಂಬಲಿ ಮಾಡಿ ಕುಡಿದರೆ ಆರೋಗ್ಯಕ್ಕೆ ತುಂಬಾ ಉಪಯುಕ್ತ..
ಹೌದು… ಒಂದೊಮ್ಮೆ ರಾತ್ರಿ ರಾಗಿ ಮುದ್ದೆ ಮಿಕ್ಕರೆ ,, ಅದಕ್ಕೆ ನೀರು ಹಾಕಿ ನೆನೆಯಲು ಬಿಟ್ಟು ಬಿಡಿ.. ಮುಂಜಾನೆ ಎದ್ದು ಅದಕ್ಕೆ ಮೊಸರು, ಉಪ್ಪು ಹಾಕಿ ಅದನ್ನ ತೆಳುವಾಗಿ ಕಲಸಿಕೊಳ್ಳಿ… ಆ ನಂತರ ಅದಕ್ಕೆ ಹೆಚ್ಚಿದ ಈರುಳ್ಳಿ , ಕೊತ್ತಂಬರಿ ಸೊಪ್ಪು , ಹಸಿರು ಮೆಣಸಿನ ಕಾಯಿ ಹಾಕಿ… ಬೇಕಿದ್ದಲ್ಲಿ ಒಂದು ಟೀ ಸ್ಪೂನ್ ಎಣ್ಣೆಗೆ ಜೀರಿಗೆ ಕರಿಬೇವು ಹಾಕಿ ಒಗ್ಗರಣೆ ಕೊಟ್ಟು ಅದನ್ನ ಮೊಸರು ಮುದ್ದೆ ಮಿಶ್ರಣಕ್ಕೆ ಸೇರಿಸಿ… ಸವಿಯಿರಿ.. ಇದು ದೇಹವನ್ನ ತಂಪಾಗಿಡುವಲ್ಲಿ ಬಹಳ ಸಹಕಾರಿಯಾಗಿದೆ..







![pandavapura-free-health-camp-darshan-puttannaiah-october-8]](https://saakshatv.com/wp-content/uploads/2026/10/darsan-350x250.png)
