ಬೇಕಾಗುವ ಸಾಮಗ್ರಿಗಳು:
1 ಕಿ.ಗ್ರಾಂ ಮಟನ್
1 ಚಮಚ ಜೀರಿಗೆ,
1 ಚಮಚ ಕ್ಯಾರೆವೇ ಬೀಜಗಳು,
3 ಏಲಕ್ಕಿ,
2 ಬೇ ಲೀಫ್(ಪಲಾವ್ ಎಲೆ)
ಸಣ್ಣ ತುಂಡು ಚೆಕ್ಕೆ
150 ಗ್ರಾಂ ಮೊಸರು
2 ಚಮಚ ಕಾಶ್ಮೀರಿ ಕೆಂಪು ಮೆಣಸಿನಕಾಯಿ ಪುಡಿ,
1 ಚಮಚ ಕೆಂಪು ಮೆಣಸಿನ ಪುಡಿ,
1 ಚಮಚ ಕೊತಂಬರಿ ಪುಡಿ,
1/2 ಚಮಚ ಅರಿಶಿನ ಪುಡಿ
1 ಚಮಚ ಬಿರಿಯಾನಿ ಪೌಡರ್
1/2 ಕಪ್ ಹಾಲು
ಚಿಟಕಿಯಷ್ಟು ಕೇಸರಿ
ಹೆಚ್ಚಿದ ಈರುಳ್ಳಿ 3
3 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಸ್ವಲ್ಪ ಕೊತ್ತಂಬರಿ ಮತ್ತು ಪುದೀನ ಸೊಪ್ಪು
1/2 ಕೆ.ಜಿ ಬಿರಿಯಾನಿ ಅಕ್ಕಿ
ತುಪ್ಪ – 4 ಚಮಚ
1 ನಿಂಬೆ
1 ಚಮಚ ಕಸ್ತೂರಿ ಮೇತಿ
ಸ್ವಲ್ಪ ಹುರಿದ ಗೋಡಂಬಿ ಮತ್ತು ದ್ರಾಕ್ಷಿ
ರುಚಿಗೆ ತಕ್ಕಷ್ಟು ಉಪ್ಪು
Health ಕೋವಿಡ್ ಸಮಯದಲ್ಲಿ : ರೋಗ ನಿರೋಧ ಶಕ್ತಿಗಾಗಿ ಕೆಲ ಆಹಾರ ಪದಾರ್ಥಗಳು
ಮಾಡುವ ವಿಧಾನ
ಮೊದಲಿಗೆ ಮಟನ್ ಅನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಕತ್ತರಿಸಿ ಇಟ್ಟು ಕೊಳ್ಳಿ. ನಂತರ ಬಿರಿಯಾನಿ ಅಕ್ಕಿಯನ್ನು ಅರ್ಧ (70%) ಬೇಯಿಸಿ ಬಸಿದು ಒಂದು ತಟ್ಟೆಯಲ್ಲಿ ಹರಡಿ.
ಜೀರಿಗೆ, ಕ್ಯಾರೆವೇ ಬೀಜಗಳು, ಏಲಕ್ಕಿ, ಚೆಕ್ಕೆ ಹುರಿದು ಪುಡಿ ಮಾಡಿ. ಬಳಿಕ ಅದಕ್ಕೆ ಮೊಸರು, ಕಾಶ್ಮೀರಿ ಕೆಂಪು ಮೆಣಸಿನಕಾಯಿ ಪುಡಿ, ಕೆಂಪು ಮೆಣಸಿನ ಪುಡಿ, ಬಿರಿಯಾನಿ ಪೌಡರ್, ಕೊತಂಬರಿ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ನಂತರ ಮಟನ್ ತುಂಡುಗಳ ಜೊತೆಗೆ ಚೆನ್ನಾಗಿ ಬೆರೆಸಿ.
ಈ ಮಿಶ್ರಣವನ್ನು ರಾತ್ರಿಯಿಡೀ ಅಥವಾ ಕನಿಷ್ಠ 3 ಗಂಟೆ ಮ್ಯಾರಿನೇಟ್ ಮಾಡಿ. ನಂತರ ಕುಕ್ಕರ್ ನಲ್ಲಿ ತುಪ್ಪ ಬಿಸಿ ಮಾಡಿ ಬೇ ಲೀಫ್, ಹೆಚ್ಚಿದ 2 ಈರುಳ್ಳಿ ಸೇರಿಸಿ. ಈರುಳ್ಳಿ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಮ್ಯಾರಿನೇಟ್ ಮಟನ್ ಸೇರಿಸಿ ಮತ್ತು 5 ನಿಮಿಷಗಳ ಕಾಲ ಚೆನ್ನಾಗಿ ಮಿಶ್ರ ಮಾಡಿ. ಕತ್ತರಿಸಿದ ಕೊತ್ತಂಬರಿ ಮತ್ತು ಪುದೀನ ಎಲೆಗಳನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ.
ನಿಂಬೆ ರಸವನ್ನು ಸೇರಿಸಿ ಮತ್ತು 5 ಸೀಟಿ ಕೂಗುವವರೆಗೆ ಬೇಯಿಸಿ. ಈಗ ಪಾತ್ರೆಯನ್ನು ತೆಗೆದುಕೊಂಡು ತಳಭಾಗಕ್ಕೆ ತುಪ್ಪವನ್ನು ಸವರಿ. ನಂತರ ತೆಳುವಾಗಿ ಸ್ವಲ್ಪ ಅರ್ಧ ಬೇಯಿಸಿದ ಅನ್ನವನ್ನು ಹರಡಿ. ಅದರ ಮೇಲೆ ಮಟನ್ ತುಂಡುಗಳು ಮತ್ತು ಗ್ರೇವಿ ಸೇರಿಸಿ. ಸ್ವಲ್ಪ ಕೊತ್ತಂಬರಿ -ಪುದೀನಾ ಸೊಪ್ಪು ಸೇರಿಸಿ ಹೀಗೆ ಅನ್ನ ಹಾಗೂ ಮಟನ್ ಅನ್ನು ಪದರ-ಪದರವಾಗಿ ಹರಡಿ. ಪ್ರತಿ ಬಾರಿಯೂ ಅನ್ನದ ಮೇಲೆ ಕೇಸರಿ ಹಾಕಿಟ್ಟ ಹಾಲನ್ನು ಚಿಮುಕಿಸಿ. ನಂತರ ಹುರಿದ ಗೋಡಂಬಿ ದ್ರಾಕ್ಷಿ ಈರುಳ್ಳಿ ಮತ್ತು ಕಸೂರಿ ಮೇತಿ ಸೇರಿಸಿ ಮುಚ್ಚಳವನ್ನು ಮುಚ್ಚಿ ಮತ್ತು ಕಡಿಮೆ ಜ್ವಾಲೆಯಲ್ಲಿ 20-30 ನಿಮಿಷಗಳ ಕಾಲ ಬೇಯಿಸಿ. ಈಗ ರುಚಿಯಾದ ಹೈದರಾಬಾದಿ ಮಟನ್ ದಮ್ ಬಿರಿಯಾನಿ ಸವಿಯಲು ಸಿದ್ಧ.