ರುಚಿಕರ / ಸುಲಭ ಅಡುಗೆ ರೆಸಿಪಿಗಳು ನಿಮಗಾಗಿ

1 min read

ಪನ್ನೀರ್ ಬಿರಿಯಾನಿ

ಬೇಕಾಗುವ ಸಾಮಾಗ್ರಿಗಳು

ಪನ್ನೀರ್ – 1 ಕಪ್
ಭಾಸ್ಮತಿ ಅಕ್ಕಿ 1 ಕಪ್

ಪಲಾವ್ ಎಲೆ 2,
ಚಕ್ಕೆ 1,
ಲವಂಗ 4,
ಏಲಕ್ಕಿ 2,
ಗೋಡಂಬಿ 8-10,
ಪುದೀನಾ ಸೊಪ್ಪು 1 ಕಟ್ಟು
ಕೊತ್ತಂಬರಿಸೊಪ್ಪು – ಸ್ವಲ್ಪ
ಬೆಳ್ಳುಳ್ಳಿ ಎಸಳು – 5-6
ಶುಂಠಿ – ಸಣ್ಣ ತುಂಡು
ಸೋಂಪು – 1 ಚಮಚ
ಗಟ್ಟಿ ಮೊಸರು – 2 ಚಮಚ

ಉದ್ದಕ್ಕೆ ಹೆಚ್ಚಿದ ಈರುಳ್ಳಿ – 1,
ಸಣ್ಣಗೆ ಕತ್ತರಿಸಿದ ಹಸಿಮೆಣಸು – 2
ಹೆಚ್ಚಿದ ಟೊಮೆಟೊ – 1

ಮೆಣಸಿನ ಪುಡಿ 1 ಚಮಚ,
ಬಿರಿಯಾನಿ ಮಸಾಲಾ 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
Saakshatv cooking recipe how to cook paneer biryani

ಮಾಡುವ ವಿಧಾನ

ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ನಂತರ ಕತ್ತರಿಸಿಕೊಂಡ ಪನ್ನೀರ್ ತುಂಡುಗಳನ್ನು ಸ್ವಲ್ಪ ಕೆಂಪಗೆ ಆಗುವವರೆಗೆ ಹುರಿಯಿರಿ.
ನಂತರ ಮಿಕ್ಸಿ ಜಾರಿಗೆ ಪುದೀನಾ ಸೊಪ್ಪು, ಕೊತ್ತಂಬರಿಸೊಪ್ಪು, ಬೆಳ್ಳುಳ್ಳಿ ಎಸಳು, ಚಿಕ್ಕ ಶುಂಠಿ, ಸೋಂಪ್ ಹಾಕಿ ನೀರು ಹಾಕದೆ ನುಣ್ಣಗೆ ರುಬ್ಬಿ. ನಂತರ ಅದಕ್ಕೆ 2 ಚಮಚ ಗಟ್ಟಿ ಮೊಸರು ಸೇರಿಸಿ ಮತ್ತೊಮ್ಮೆ ರುಬ್ಬಿ.

ಈಗ ಕುಕ್ಕರಿನಲ್ಲಿ ಎಣ್ಣೆ ಬಿಸಿ ಮಾಡಿ ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಗೋಡಂಬಿ ಗಳನ್ನು ಹುರಿಯಿರಿ. ನಂತರ
ಈರುಳ್ಳಿ, ಹಸಿಮೆಣಸು ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಹೆಚ್ಚಿಕೊಂಡ ಟೊಮೆಟೊ ಸೇರಿಸಿ ಹುರಿಯಿರಿ.
ಈಗ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ, ಉಪ್ಪು, ಮೆಣಸಿನ ಪುಡಿ, ಬಿರಿಯಾನಿ ಮಸಾಲಾ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಹುರಿದಿಟ್ಟುಕೊಂಡ ಪನ್ನೀರ್ ಸೇರಿಸಿ ಚೆನ್ನಾಗಿ ಬೆರೆಸಿ.

ಈಗ ಈ ಮಿಶ್ರಣಕ್ಕೆ ಅರ್ಧ ಗಂಟೆ ನೆನೆಸಿಟ್ಟುಕೊಂಡ ಅಕ್ಕಿಯನ್ನು ಸೇರಿಸಿ. (1 ಅಳತೆಗೆ ಒಂದುವರೆ ಅಳತೆ ನೀರು) ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 1 ವಿಷಲ್ ಬರುವವರೆಗೆ ಬೇಯಿಸಿ.
ರುಚಿಯಾದ ಪನ್ನೀರ್ ಬಿರಿಯಾನಿ ರೆಡಿಯಾಗಿದೆ. ಇದನ್ನು ರಾಯತ ಜೊತೆ ಸವಿಯಿರಿ.

ಕಾಳು ಮೆಣಸು ಸಾರು (ಬಾಣಂತಿ ಸಾರು)

ಬೇಕಾಗುವ ಸಾಮಗ್ರಿಗಳು

ಧನಿಯಾ ಕಾಳು – 1ಚಮಚ
ಕಾಳು ಮೆಣಸು – 2 ಚಮಚ
ಜೀರಿಗೆ – 1/4 ಟೀ ಚಮಚ
ಓಂ ಕಾಳು – 1/4 ಚಮಚ
ಒಣ ಮೆಣಸಿನಕಾಯಿ ( ಬ್ಯಾಡಗಿ ಮೆಣಸು) – 10
ಬೆಳ್ಳುಳ್ಳಿ – 1 ಗಡ್ಡೆ
ಈರುಳ್ಳಿ – 1/4 ಭಾಗ
ಹುಣಸೆ ಹುಳಿ – ಸ್ವಲ್ಪ

ಮಾಡುವ ವಿಧಾನ

ಮೊದಲಿಗೆ ಹುಣಸೆ ಹುಳಿಯನ್ನು ಬಿಸಿನೀರಿನಲ್ಲಿ ನೆನೆಸಿಡಿ.
ನಂತರ ಎಲ್ಲಾ ಮಸಾಲಾ ಪದಾರ್ಥಗಳನ್ನು ಎಣ್ಣೆ ಹಾಕದೆ ಮಂದ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ನಂತರ ಈರುಳ್ಳಿ ಮತ್ತು ಬೆಳ್ಳುಳ್ಳಿಗಳನ್ನು ಪ್ರತ್ಯೇಕವಾಗಿ ಎಣ್ಣೆ ಹಾಕದೆ ಕೆಂಪಗೆ ಆಗುವವರೆಗೆ ಹುರಿಯಿರಿ. ಎಲ್ಲಾ ಮಸಾಲೆ ಪದಾರ್ಥಗಳು ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿ.‌ಅದಕ್ಕೆ 2 ಚಮಚ ಕೊಬ್ಬರಿ ತುರಿಯನ್ನು ಸೇರಿಸಿ ಪುನಃ ರುಬ್ಬಿ. ನಂತರ ನೆನೆಸಿದ ಹುಣಸೆ ಹುಳಿಯನ್ನು ಚೆನ್ನಾಗಿ ಕಿವುಚಿ ರಸ ತೆಗೆದು ರುಬ್ಬಿದ ಮಿಶ್ರಣಕ್ಕೆ ಬೆರೆಸಿ. ಬಳಿಕ ಚೆನ್ನಾಗಿ ಕುದಿಸಿ. ನಂತರ ಅದಕ್ಕೆ ತುಪ್ಪದಲ್ಲಿ, ಸಾಸಿವೆ, ಕರಿಬೇವು, ಒಣಮೆಣಸಿನ ಒಗ್ಗರಣೆ ಕೊಡಿ. ಈಗ ಆರೋಗ್ಯಕರ ಕಾಳು ಮೆಣಸು ಸಾರು ರೆಡಿಯಾಗಿದೆ. ಇದು ಜ್ವರ, ಶೀತ, ಕೆಮ್ಮು, ಮೈ ನೋವು ಇವುಗಳಿಂದ ದೂರವಿರಲು ನೆರವಾಗುತ್ತದೆ.

ಅನಾನಸ್ (ಪೈನಾಪಲ್) ಹಣ್ಣಿನ ಗೊಜ್ಜು

1 min read

ಅನಾನಸ್ (ಪೈನಾಪಲ್) ಹಣ್ಣಿನ ಗೊಜ್ಜು

ಬೇಕಾಗುವ ಪದಾರ್ಥಗಳು

ಅನಾನಸ್ ಅಥವಾ ಪೈನಾಪಲ್ – 1/2 ಹಣ್ಣು
ಬ್ಯಾಡಗಿ ಮೆಣಸು – 8-10
ಕಡಲೆ ಬೇಳೆ- 2 ಚಮಚ
ಉದ್ದಿನ ಬೇಳೆ -2 ಚಮಚ
ಎಳ್ಳು -2 ಚಮಚ
ಮೆಂತೆ- 1/4 ಚಮಚ
ಸಾಸಿವೆ- 1/2 ಚಮಚ
ಎಣ್ಣೆ- ಒಗ್ಗರಣೆಗೆ ಸ್ವಲ್ಪ
ಕೊಬ್ಬರಿ ತುರಿ- 2 ಚಮಚ
ಬೆಲ್ಲ – 1 ತುಂಡು
ರುಚಿಗೆ ತಕ್ಕಷ್ಟು ಉಪ್ಪು
ಅರಿಶಿನ – ಸ್ವಲ್ಪ

ಮಾಡುವ ವಿಧಾನ

ಮೊದಲಿಗೆ ಅನಾನಸ್ ಹಣ್ಣಿನ ಮೇಲಿನ ಸಿಪ್ಪೆಯನ್ನು ತೆಗೆದು ಸಣ್ಣ ಹೋಳುಗಳನ್ನಾಗಿ ಹೆಚ್ಚಿ ಪಕ್ಕದಲ್ಲಿ ಇಡಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಸಾಸಿವೆ ಸೇರಿಸಿ. ಸಾಸಿವೆ ಸಿಡಿದ ಬಳಿಕ ಕಡಲೆ ಬೇಳೆ, ಉದ್ದಿನ ಬೇಳೆ, ಮೆಂತ್ಯ, ಬ್ಯಾಡಗಿ ಮೆಣಸು, ಎಳ್ಳು, ಕೊಬ್ಬರಿ ತುರಿ ಸೇರಿಸಿ ಹುರಿಯಿರಿ.
ಅದು ತಣ್ಣಗಾದ ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ರುಬ್ಬಿ. ಈಗ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಸಾಸಿವೆ ಸೇರಿಸಿ. ಅದು ಸಿಡಿದ ಬಳಿಕ ಅರಿಶಿನ ಮತ್ತು ಅನಾನಸ್ ಹೋಳುಗಳನ್ನು ಹಾಕಿ ಸ್ವಲ್ಪ ಹುರಿದು ನಂತರ ನೀರು ಹಾಕಿ ಬೇಯಿಸಿಕೊಳ್ಳಿ. ಬಳಿಕ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ ಒಂದು ಕುದಿ ಬರಿಸಿಕೊಳ್ಳಿ. ಒಂದು ಕುದಿ ಬಂದ ಮೇಲೆ ಅದಕ್ಕೆ ಬೆಲ್ಲ, ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಈಗ ರುಚಿಯಾದ ಪೈನಾಪಲ್ ಗೊಜ್ಜು ಅನ್ನದ ಜೊತೆಗೆ ‌ಸವಿಯಲು ಸಿದ್ಧವಾಗಿದೆ.

ಪುದಿನಾ ಮಸಾಲಾ ರವಾ ಇನ್-ಸ್ಟಂಟ್(instant) ಇಡ್ಲಿ

ಬೇಕಾಗುವ ಸಾಮಾಗ್ರಿಗಳು
ರವೆ – 1 ಕಪ್
ಮೊಸರು – 1/2 ಲೀಟರ್
ಕಡ್ಲೆಬೇಳೆ – 2 ಚಮಚ
ಉದ್ದಿನ ಬೇಳೆ – 2 ಚಮಚ
ಸಾಸಿವೆ – 1 ಚಮಚ
ಎಣ್ಣೆ – 1ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಕರಿಬೇವು – ಸ್ವಲ್ಪ
ಪುದಿನಾ ಸೊಪ್ಪು – ಸ್ವಲ್ಪ
ಹಸಿ ಮೆಣಸಿನಕಾಯಿ – 8
ತೆಂಗಿನಕಾಯಿ ತುರಿ – 1/2 ಕಪ್
ಶುಂಠಿ – 1 ಇಂಚು
ರುಚಿಗೆ ತಕ್ಕಷ್ಟು ‌ಉಪ್ಪು

Saakshatv cooking recipe pudina rava idli

ಮಾಡುವ ವಿಧಾನ

ಮೊದಲು ರವೆಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಹುರಿದ ರವೆಗೆ ಮೊಸರನ್ನು ಸೇರಿಸಿ ಚೆನ್ನಾಗಿ ಬೆರೆಸಬೇಕು.
ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಹಾಕಿ. ಸಾಸಿವೆ ಸಿಡಿದ ನಂತರ ಉದ್ದಿನ ಬೇಳೆ, ಕಡ್ಲೆಬೇಳೆ, ಒಂದು ಚಿಟಿಕೆ ಅರಿಶಿನ ಹಾಕಿ ಒಗ್ಗರಣೆ ಕೊಡಿ. ಮೊಸರಿನಲ್ಲಿ ಮಿಶ್ರವಾಗಿರುವ ರವೆಗೆ ಈ ಒಗ್ಗರಣೆಯನ್ನು ಸೇರಿಸಿ ಚೆನ್ನಾಗಿ ಬೆರೆಸಿ.

ನಂತರ ಪುದಿನಾ, ಕೊತ್ತಂಬರಿಸೊಪ್ಪು, ತೆಂಗಿನತುರಿ, ಹಸಿ ಮೆಣಸಿನಕಾಯಿ, ಶುಂಠಿಗಳನ್ನು ಮಿಕ್ಸಿ ಜಾರಿನಲ್ಲಿ ಹಾಕಿ ನೀರು ಹಾಕದೆ ಚೆನ್ನಾಗಿ ರುಬ್ಬಿ. ನಂತರ ಮೊಸರಿನಲ್ಲಿ ಮಿಶ್ರವಾಗಿರುವ ರವೆಗೆ ಸೇರಿಸಿ ಚೆನ್ನಾಗಿ ಬೆರೆಸಿ. ಉಪ್ಪನ್ನು ಸೇರಿಸಿ ಮತ್ತೊಮ್ಮೆ ಕಲಸಿ.
ಬಳಿಕ 1.30 ಯಿಂದ 2 ಗಂಟೆ ತನಕ ಈ ಮಿಶ್ರಣವನ್ನು ಹಾಗೆಯೇ ಬಿಡಿ. ನಂತರ ಇಡ್ಲಿ ಹದಕ್ಕೆ ಹಿಟ್ಟನ್ನು ತಯಾರಿಸಿ 15 ನಿಮಿಷ ಇಡ್ಲಿ ಪಾತ್ರೆಯಲ್ಲಿ ಬೇಯಿಸಿ. ಈಗ ಮಸಾಲಾ ರವಾ ಇಂಸ್ಟೆಂಟ್ ಇಡ್ಲಿ ಚಟ್ನಿಯೊಂದಿಗೆ ಸವಿಯಲು ಸಿದ್ಧವಾಗಿದೆ.

ನುಗ್ಗೆ ಸೊಪ್ಪು ಮಸಾಲಾ ಚಪಾತಿ

ಬೇಕಾಗುವ ಸಾಮಗ್ರಿಗಳು

ಗೋಧಿ ಹಿಟ್ಟು – 1 ಕಪ್
ಕತ್ತರಿಸಿದ ನುಗ್ಗೆ ಸೊಪ್ಪು – 1 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಹಸಿ ಮೆಣಸಿನಕಾಯಿ ಪೇಸ್ಟ್
ಕೆಂಪು ಮೆಣಸಿನ ಪುಡಿ
ಜೀರಿಗೆ – 1/2 ಚಮಚ
ಅಜ್ವೈನ್ – 1/4 ಚಮಚ
ಅರಿಶಿನ – 1/4 ಚಮಚ
ಅಗತ್ಯವಿರುವಷ್ಟು ನೀರು
Saakshatv cooking recipe drumstick masala chapathi

ತಯಾರಿಸುವ ‌ವಿಧಾನ
ಮೊದಲಿಗೆ ಗೋಧಿ ಹಿಟ್ಟು, ನುಗ್ಗೆ ಸೊಪ್ಪು, ಹಸಿ ಮೆಣಸಿನಕಾಯಿ ಪೇಸ್ಟ್, ಕೆಂಪು ಮೆಣಸಿನ ಪುಡಿ, ಜೀರಿಗೆ, ಅಜ್ವೈನ್, ಅರಿಶಿನ, ಉಪ್ಪುಅನ್ನು ಒಟ್ಟಿಗೆ ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಅಗತ್ಯವಿರುವಷ್ಟು ನೀರು ಸೇರಿಸಿ ‌ಮೃದುವಾದ ಚಪಾತಿ ಹಿಟ್ಟನ್ನು ತಯಾರಿಸಿಕೊಳ್ಳಿ. 10 ನಿಮಿಷಗಳ ಕಾಲ ಹಾಗೆ ಬಿಡಿ.
ನಂತರ ಚಪಾತಿಗಳನ್ನು ಲಟ್ಟಿಸಿ. ತವಾವನ್ನು ಬಿಸಿ ಮಾಡಿ ತುಪ್ಪವನ್ನು ಸವರಿ ಚಪಾತಿಯ ಎರಡೂ ಬದಿಯನ್ನು ಚೆನ್ನಾಗಿ ಕಾಯಿಸಿಕೊಳ್ಳಿ. ಈಗ ನುಗ್ಗೆ ಸೊಪ್ಪು ಮಸಾಲಾ ಚಪಾತಿ ಸಿದ್ಧವಾಗಿದೆ. ನಿಂಬೆ ಉಪ್ಪಿನಕಾಯಿ ಅಥವಾ ಈರುಳ್ಳಿ ಚಟ್ನಿಯೊಂದಿಗೆ ನುಗ್ಗೆ ಸೊಪ್ಪು ಮಸಾಲಾ ಚಪಾತಿ ಸವಿಯಿರಿ.

ತೊಂಡೆಕಾಯಿ ಬಜ್ಜಿ

ಬೇಕಾಗುವ ಸಾಮಾಗ್ರಿಗಳು

ತೊಂಡೆಕಾಯಿ – 10
ಕಡ್ಲೆಹಿಟ್ಟು 1 ಕಪ್
ಅಕ್ಕಿಹಿಟ್ಟು -2 ಚಮಚ
ಕಾರ್ನಫ್ಲೋರ್ -1 ಚಮಚ
ಮೆಣಸಿನ ಪುಡಿ – 1ಚಮಚ
ಓಮ – 1/4 ಚಮಚ
ಅಗತ್ಯಕ್ಕೆ ತಕ್ಕಷ್ಟು ಅರಿಶಿಣ
ರುಚಿಗೆ ತಕ್ಕಷ್ಟು ಉಪ್ಪು
ಸ್ವಲ್ಪ ನೀರು
ಹುರಿಯಲು ಎಣ್ಣೆ
Saakshatv cooking recipe how to prepare thondekayi bajji

ತಯಾರಿಸುವ ವಿಧಾನ

ಮೊದಲಿಗೆ ತೊಂಡೆಕಾಯಿಗಳನ್ನು ಉದ್ದಗೆ ಹೆಚ್ಚಿಕೊಳ್ಳಿ. ನಂತರ ಕಾರ್ನಫ್ಲೋರ್ , ಅಕ್ಕಿಹಿಟ್ಟು, ಕಡ್ಲೆಹಿಟ್ಟು, ಮೆಣಸಿನ ಪುಡಿ, ಓಮ, ಅರಿಶಿನ, ಉಪ್ಪು, ಮತ್ತು ಸ್ವಲ್ಪ ನೀರು ಹಾಕಿ ಹಿಟ್ಟನ್ನು ಕಲಸಿಕೊಳ್ಳಬೇಕು. ಬಳಿಕ ಉದ್ದಕ್ಕೆ ಹೆಚ್ಚಿಟ್ಟುಕೊಂಡ ತೊಂಡೆಕಾಯಿಗಳನ್ನು ಸಿದ್ಧಪಡಿಸಿಟ್ಟು ಕೊಂಡ ಹಿಟ್ಟಿನಲ್ಲಿ ಚೆನ್ನಾಗಿ ಬೆರೆಸಿ.
ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ  ತೊಂಡೆಕಾಯಿಗಳನ್ನು ಎಣ್ಣೆಯಲ್ಲಿ ಹುರಿದರೆ ಬಿಸಿಬಿಸಿ ತೊಂಡೆಕಾಯಿ ಬಜ್ಜಿ ಸವಿಯಲು ಸಿದ್ಧ.

ಮದ್ದೂರು ವಡೆ

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd