ಪ್ಯಾರೇ ದೇಶ ವಾಸಿಯೋ ಗಮನಿಸಿ – ಅಡುಗೆ ಎಣ್ಣೆ ದರ ಶೇ.52ರಷ್ಟು ಹೆಚ್ಚಳ..!
ದೇಶದಲ್ಲಿ ದಿನೇ ದಿನೇ ಅಡುಗೆ ಬೆಲೆ , ಅಗತ್ಯ ವಸ್ತುಗಳ ಬೆಲೆ, ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದೆ.. ಈ ನಡುವೆ ಬಡವವರು , ಮಧ್ಯಮವರ್ಗದವರ ಪರಿಸ್ಥಿತಿ ಹದಗೆಡುತ್ತಾ ಹೋಗ್ತಿದೆ.. ಇಷ್ಟಾದ್ರೂ ಬೆಲೆ ಏರಿಕೆ ಪರ್ವ ಮಾತ್ರ ನಿಲ್ತಿಲ್ಲ.. ಈಗಾಗಲೇ ಅಡುಗೆ ಎಣ್ಣೆ ಬೆಲೆ 150 ರೂಪಾಯಿ ದಾಟಿದೆ.. ಖಾದ್ಯ ತೈಲ ಬೆಲೆ ಹೆಚ್ಚಳ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 52 ರಷ್ಟು ಹೆಚ್ಚಳವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಸರಾಸರಿ ದರ ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದಾಗ ಈ ವರ್ಷದ ಜುಲೈನಲ್ಲಿ ಶೇಕಡ 52 ರಷ್ಟು ಜಾಸ್ತಿಯಾಗಿದೆ.
ಕೊರೋನಾ ಕಾರಣದಿಂದ ಧಾನ್ಯ ಮತ್ತು ಖಾದ್ಯ ತೈಲದ ಬೆಲೆಯಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ.. ಅಡುಗೆ ಎಣ್ಣೆ ದರ ಕಡಿಮೆ ಮಾಡುವ ಉದ್ದೇಶದಿಂದ ಕಚ್ಚಾ ತಾಳೆ ಎಣ್ಣೆ ಮೇಲಿನ ಸುಂಕವನ್ನು ಜೂನ್ 30 ರಿಂದ ಅನ್ವಯವಾಗುವಂತೆ ಶೇಕಡ 5 ರಷ್ಟು ಕಡಿಮೆ ಮಾಡಲಾಗಿತ್ತು. ಕೇಂದ್ರ ಸರ್ಕಾರ, ಸೆಪ್ಟೆಂಬರ್ 30 ರವರೆಗೂ ಕಚ್ಚಾ ತಾಳೆ ಎಣ್ಣೆ ಮೇಲಿನ ಸುಂಕವನ್ನು ಶೇಕಡ 5 ರಷ್ಟು ಕಡಿಮೆ ಮಾಡಿದ್ದು, ದೇಶದಲ್ಲಿ ಬಳಕೆಯಾಗುವ ಖಾದ್ಯ ತೈಲದ ಶೇಕಡ 60 ರಿಂದ 70 ರಷ್ಟು ಆಮದು ಮಾಡಿಕೊಳ್ಳಲಾಗುತ್ತಿದೆ.
ಇನ್ನು ತಾಳೆ ಎಣ್ಣೆ ಶೇಕಡ 44.42 ರಷ್ಟು, ಸೂರ್ಯಕಾಂತಿ ಎಣ್ಣೆ ಶೇಕಡ 51.62 ರಷ್ಟು, ಸೋಯಾ ಎಣ್ಣೆ ಶೇಕಡ 48.07 ರಷ್ಟು, ಸಾಸಿವೆ ಎಣ್ಣೆ ಶೇಕಡ 39.03 ರಷ್ಟು ಹಾಗೂ ಶೇಂಗಾ ಎಣ್ಣೆ ಶೇಕಡ 19.24 ರಷ್ಟು ಏರಿಕೆಯಾಗಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.