ಮಹಿಳೆ ಮೇಲೆ ಪತಿ ಸಹೋದರರಿಂದಲೇ ಅತ್ಯಾಚಾರ – ಹೇಯ ಕೃತ್ಯಕ್ಕೆ ಸಾಥ್ ನೀಡಿದ್ದ ಗಂಡ..!
ಹರಿಯಾಣದಲ್ಲೊಂದು ಮನುಕುಲವೇ ತಲೆತಗ್ಗಿಸುವಂತಹ ಘಟನೆ ನಡೆದಿದೆ.. ಮಹಿಳೆಯೊಬ್ಬಳಿಗೆ ಆಕೆಯ ಗಂಡನ ಮನೆಯಲ್ಲಿ ಚಿತ್ರ ಹಿಂಸೆ ಕೊಡಲಾಗಿದೆ. ಆಕೆಯನ್ನ ಕೋಣೆಯಲ್ಲಿ ಕೂಡಿ ಹಾಕಿ ಥಳಿಸಿದ್ದು ಅಲ್ಲದೇ ಅತ್ಯಾಚಾರವೆಸಗಲಾಗಿದೆ.. ಆಕೆಯ ಪgತಿಯ ಸಹೋದರು ಅತ್ಯಾಚಾರವೆಸಗಿದ್ದಾರೆ. ಆದ್ರೆ ಆಘಾತಕಾರಿ ಸಂಗತಿ ಎಂದ್ರೆ ಈ ಕೃತ್ಯಕ್ಕೆ ಖುದ್ದು ಮಹಿಳೆಯ ಪತಿ ಸಾಥ್ ನೀಡಿದ್ದಾನೆ ಎಂದು ಇದೀಗ ಸಂತ್ರಸ್ತೆಯು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಹರಿಯಾಣದ ಯಮುನಾನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ತನ್ನ ಪತಿ ಹಾಗೂ ಆತನ ಇಬ್ಬರು ಸಹೋದರರು ಮನೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿ ನಿರಂತರ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಮದುವೆಯಾದ ಸಂದರ್ಭದಲ್ಲಿ ಅನ್ಯೋನ್ಯವಾಗಿದ್ದ ಪತಿ ನಂತರದಲ್ಲಿ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದ. ಸಣ್ಣ ವಿಚಾರಕ್ಕೂ ಜಗಳವಾಡಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ತನ್ನ ಸಹೋದರರಿಗೂ ಪತ್ನಿಗೆ ಕಿರುಕುಳ ನೀಡುವಂತೆ ತಿಳಿಸಿದ್ದ. ಈ ನಡುವೆ ಮಹಿಳೆಗೆ ಮಗುವಾಗಿ ಪೋಷಕರ ಮನೆಯಲ್ಲಿ ಉಳಿದುಕೊಂಡಿದ್ದಾಳೆ. ಕೆಲದಿನಗಳ ನಂತರ ಮತ್ತೆ ಗಂಡನ ಮನೆಗೆ ಆಗಮಿಸಿದ್ದ ಆಕೆಗೆ ಮತ್ತೆ ಕಿರುಕುಳ ನೀಡಲಾಗಿದೆ.
ಮನೆಯಲ್ಲಿ ಕೂಡಿಹಾಕಿ ಗಂಡ ಹಾಗೂ ಆತನ ಸಹೋದರರಿಬ್ಬರು ನಿರಂತರ ಅತ್ಯಾಚಾರ ಎಸಗಿ ಅಮಾನವೀಯವಾಗಿ ವರ್ತಿಸಿದ್ದಾರೆ. ಮಹಿಳೆ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.