Cooking : ಗೋದಿ ಹಿಟ್ಟಿನ ಹಲ್ವಾ ರೆಸಿಪಿ..!!!
1 min read
Cooking : ಗೋದಿ ಹಿಟ್ಟಿನ ಹಲ್ವಾ ರೆಸಿಪಿ..!!!
1/2 ಕಪ್ ಗೋಧಿ ಹಿಟ್ಟು
1/2 ಕಪ್ ಸಕ್ಕರೆ
3 ಕಪ್ ನೀರು
ದೇಸಿ ತುಪ್ಪ
ಒಣ ಹಣ್ಣುಗಳು
ಮಾಡುವ ವಿಧಾನ-
ದಪ್ಪ ತಳದ ಪ್ಯಾನ್ ಗ್ಯಾಸ್ ಮೇಲಿರಿಸಿ ಮಧ್ಯಮ ಉರಿಯಲ್ಲಿ ಕಾಯಿಸಿ.. ಅದಕ್ಕೆ ನೀರನ್ನು ಹಾಕಿ ಕುದಿಯಲು ಬಿಡಿ.. ಕುದಿ ಬಂದಾಗ ಸಕ್ಕರೆ ಸೇರಿಸಿ, ಒಮ್ಮೆ ಬೆರೆಸಿ ಮತ್ತು 2 ರಿಂದ 5 ನಿಮಿಷಗಳ ಕಾಲ ಕುದಿಸಲು ಬಿಡಿ, ಸಕ್ಕರೆ ಸಂಪೂರ್ಣವಾಗಿ ಕರಗಲು ಬಿಡಿ..
ಮತ್ತೊಂದು ಕಡೆ ಕಡಿಮೆ ಮಧ್ಯಮ ಉರಿಯಲ್ಲಿ ಇನ್ನೊಂದು ಪ್ಯಾನ್ ಅನ್ನು ಇರಿಸಿ ಅದರಲ್ಲಿ ತುಪ್ಪವನ್ನು ಕರಗಿಸಿ. ತುಪ್ಪ ಪೂರ್ತಿ ಕರಗಿದಾಗ ಅದಕ್ಕೆ ಗೋಧಿ ಹಿಟ್ಟು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಅದಕ್ಕೆ ಸಕ್ಕರೆ ನೀರು ಹಾಕಿ ಚೆನ್ನಾಗಿ ಕಲಸಿ.
ಹುರಿದ ಹಿಟ್ಟನ್ನು ತಳಕ್ಕೆ ಅಂಟಿಕೊಳ್ಳದಂತೆ ನಿರಂತರವಾಗಿ ತಿರುಗಿಸುತ್ತಿರಿ.. ಈ ಮಿಶ್ರಣವು ಕೆಲವು ಸೆಕೆಂಡುಗಳಲ್ಲಿ ಗಟ್ಟಿಯಾಗಲು ಪ್ರಾರಂಭವಾಗುತ್ತದೆ. ನೀರೆಲ್ಲಾ ಇಂಗಿ ಹಿಟ್ಟು ತಳ ಬಿಡುತ್ತದೆ.. ಈಗ ಹಲ್ವಾ ತಯಾರಾಗಿದೆ.. ಈ ವೇಳೆ ಡ್ರೈ ಫ್ರೂಟ್ಸ್ ಸೇರಿಸಿಕೊಳ್ಳಿ..