cooking : ತುಂಬಾ ಟೇಸ್ಟಿ , ಮಾಡುವುದಕ್ಕೂ ಸುಲಭ … ಗೋಧಿ ಲಾಡು ರೆಸಿಪಿ
ಗೋಧಿ ಹುಡಿ 1ಕಪ್
ಮಿಲ್ಕ್ ಮೇಡ್ 3/4 ಕಪ್
ಏಲಕ್ಕಿ ಪುಡಿ 1/4 ಚಮಚ
ತುಪ್ಪ 2 1/2 ಚಮಚ.
ಹುರಿದ ಗೋಡಂಬಿ, ದ್ರಾಕ್ಷಿ ಸ್ವಲ್ಪ
ಕಾಯಿಸಿದ ಹಾಲು 4 ಚಮಚ
ಮಾಡುವ ವಿಧಾನ
ಮೊದಲಿಗೆ ಬಾಣಲೆಗೆ ಗೋಧಿ ಹುಡಿ ಹಾಕಿ ಮಧ್ಯಮ ಉರಿಯಲ್ಲಿ 3 ನಿಮಿಷ ಹುರಿಯಿರಿ. ನಂತರ ಸ್ಟವ್ ಆಫ್ ಮಾಡಿ ಬಾಣಲೆಯನ್ನು ಕೆಳಗಿಳಿಸಿ.
ನಂತರ ಅದಕ್ಕೆ ಮಿಲ್ಕ್ ಮೇಡ್ ಸೇರಿಸಿ ಚೆನ್ನಾಗಿ ಬೆರೆಸಿ. ಬಳಿಕ ಇದಕ್ಕೆ ತುಪ್ಪ ಏಲಕ್ಕಿ ಪುಡಿ, ಗೋಡಂಬಿ ,ದ್ರಾಕ್ಷಿ, ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ತಣ್ಣಗಾದ ನಂತರ ಕೈಗೆ ಸ್ವಲ್ಪ ತುಪ್ಪ ಸವರಿ ಗೋಧಿ ಲಡ್ಡುಗಳನ್ನು ತಯಾರಿಸಿ. ಗೋಧಿ ಲಡ್ಡುಗಳನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ.