ರಾಜ್ಕೋಟ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿದ ಸಾಧನೆ ಮಾಡಿದ್ದು, ಕೂಲ್ ಕ್ಯಾಪ್ಟನ್ ದಾಖಲೆ ಮುರಿದಿದ್ದಾರೆ.
3ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸುವ ಮೂಲಕ ಟೆಸ್ಟ್ ಕ್ರಿಕೆಟ್ನ 11ನೇ ಶತಕ ಸಿಡಿಸಿದ್ದಾರೆ. 157 ಎಸೆತಗಳಲ್ಲಿ 100 ರನ್ ಸಿಡಿಸಿದ ರೋಹಿತ್ ಶರ್ಮಾ, 196 ಎಸೆತಗಳಲ್ಲಿ 131 ರನ್ ಗಳಿಸಿದ್ದಾರೆ. ಅಲ್ಲದೇ, ಈ ಪಂದ್ಯದಲ್ಲಿ 3 ಸಿಕ್ಸರ್ ಸಿಡಿಸಿ ಎಂ.ಎಸ್. ಧೋನಿ ಅವರ ಸಿಕ್ಸರ್ ದಾಖಲೆ ಮುರಿದಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದೇಶದ ಮೊದಲ ಹಾಗೂ ವಿಶ್ವದ 2ನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ಆಟಗಾರ ಇಯಾನ್ ಮಾರ್ಗನ್ 233 ಸಿಕ್ಸರ್ ಸಿಡಿಸಿ ನಂ.1 ಸ್ಥಾನದಲ್ಲಿದ್ದರೆ, 212 ಸಿಕ್ಸರ್ ಸಿಡಿಸಿರುವ ರೋಹಿತ್ ಶರ್ಮಾ 2ನೇ ಸ್ಥಾನದಲ್ಲಿದ್ದಾರೆ. ಎಂ.ಎಸ್ ಧೋನಿ (211 ಸಿಕ್ಸರ್), ರಿಕಿ ಪಾಂಟಿಂಗ್ (171 ಸಿಕ್ಸರ್), ಬ್ರಿಂಡನ್ ಮೆಕಲಮ್ (170 ಸಿಕ್ಸರ್) ಸಿಡಿಸುವ ಕ್ರಮವಾಗಿ ಮೂರು, ನಾಲ್ಕು ಹಾಗೂ 5ನೇ ಸ್ಥಾನದಲ್ಲಿದ್ದಾರೆ. ಭಾರತವು ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಕಳೆದುಕೊಂಡು 326 ಗಳಿಸಿದೆ. ಮೊದಲ 3 ವಿಕೆಟ್ 33 ರನ್ ಗಳಿಗೆ ಹೋಗಿದ್ದರೂ ರೋಹಿತ್, ಜಡೇಜಾ, ಸರ್ಪರಾಜ್ ತಂಡಕ್ಕೆ ಆಸರೆಯಾದರು.