ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೊನಾ ಆಂತಕ ವ್ಯಕ್ತವಾಗಿದ್ದು, ಕಳೆದ 24 ಗಂಟೆಗಳಲ್ಲಿ ಇಬ್ಬರು ಸಾವನ್ನಪ್ಪಿ, 74 ಜನರಲ್ಲಿ ಸೋಂಕು ಕಾಣಿಸಿದೆ.
ದಕ್ಷಿಣ ಕನ್ನಡದ 51 ವರ್ಷದ ಹಾಗೂ ಮೈಸೂರಿನ 51 ವರ್ಷದ ವ್ಯಕ್ತಿ ಮಹಾಮಾರಿಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 6,403 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ ಬೆಂಗಳೂರಿನಲ್ಲಿಯೇ 57 ಜನರಿಗೆ ಸೋಂಕು ಬಂದಿದೆ.
ರಾಜ್ಯದಲ್ಲಿ ಸದ್ಯ ಇಲ್ಲಿಯವರೆಗೆ ಒಟ್ಟು 464 ಸಕ್ರೀಯ ಪ್ರಕರಣಗಳಿದ್ದು, 423 ಜನರು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ. 41 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ 16 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನ ನಂತರ ಮೈಸೂರಿನಲ್ಲಿ 32 ಪ್ರಕರಣಗಳು ದಾಖಲಾಗಿವೆ. ಇನ್ನುಳಿದಂತೆ ಶಿವಮೊಗ್ಗ 9, ದಕ್ಷಿಣ ಕನ್ನಡ 8, ಹಾಸನ 8, ಮಂಡ್ಯದಲ್ಲಿ 5 ಸಕ್ರೀಯ ಪ್ರಕರಣಗಳಿವೆ.