ಇಸ್ಲಾಮಾಬಾದ್, ಜೂನ್ 8 : ಪಾಕಿಸ್ತಾನದಲ್ಲಿ ಕೊರೊನಾ ಅರ್ಭಟ ಜೋರಾಗಿದ್ದು, ಕಳೆದ 24 ಗಂಟೆಗಳಲ್ಲಿ 4,960 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 67 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ಕೊರೊನಾ ಸೋಂಕಿತರ ಇಲ್ಲಿಯವರೆಗಿನ ಒಟ್ಟು ಸಂಖ್ಯೆ 98,943ಕ್ಕೆ ಏರಿದ್ದರೆ, ಕೊರೊನಾದಿಂದ ಮೃತ ಪಟ್ಟವರ ಸಂಖ್ಯೆ 2002 ಕ್ಕೆ ಏರಿದೆ. ದೇಶದ ಅರ್ಥಿಕತೆ ಕುಸಿಯುವ ಹಿನ್ನಲೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್‌ಖಾನ್ ದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸುವುದಕ್ಕೆ ಒಪ್ಪಿರಲಿಲ್ಲ ಮತ್ತು ಇದೇ ಕಾರಣದಿಂದಾಗಿ ಕೊರೋನಾ ಪ್ರಕರಣಗಳು ಲಕ್ಷದ ಗಡಿಯ ಬಳಿ ನಿಂತಿದೆ.
ಪಾಕಿಸ್ತಾನದಲ್ಲಿ ಇದೀಗ ಕೊರೊನಾ ಪ್ರಕರಣಗಳು ಲಕ್ಷದ ಸನಿಹ ನಿಂತಿದ್ದರೂ ಮತ್ತು ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 2000 ಗಡಿದಾಟಿದ್ದರೂ ಲಾಕ್ ಡೌನ್ ಎಂದರೆ ಆರ್ಥಿಕತೆಯ ಕುಸಿತ ಮತ್ತು ಬಡತನ ಹೆಚ್ಚಳ ಎಂದೇ ಪ್ರತಿಪಾದಿಸುತ್ತಿರುವ ಇಮ್ರಾನ್ ಖಾನ್ ಲಾಕ್ ಡೌನ್ ಬಿಗಿಗೊಳಿಸಲುು ತಯಾರಿಲ್ಲ. ಸೋಂಕಿನ ಪ್ರಮಾಣ ನಿಯಂತ್ರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಮತ್ತು ಈ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಜಾಗೃತಿ ಮೂಡಿಸುವಂತೆ ಅವರು ಕರೆ ನೀಡಿದ್ದಾರೆ.
ರಾಜೀನಾಮೆ ನೀಡಲು ಸಿಎಂ ಸೂಚನೆ: ಸಭಾಪತಿ ಸ್ಥಾನಕ್ಕೆ ಅವಮಾನ ಎಂದು ಗುಡುಗಿದ ಬಸವರಾಜ್ ಹೊರಟ್ಟಿ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸಂಘರ್ಷಕ್ಕೆ ವೇದಿಕೆ ಸಿದ್ಧವಾಗಿದ್ದು, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ಮುಖ್ಯಮಂತ್ರಿಗಳು ದೂರವಾಣಿ ಕರೆ ಮಾಡಿ ರಾಜೀನಾಮೆ ನೀಡುವಂತೆ ಸೂಚಿಸಿರುವುದು...








