ಕೊರೊನಾ ಭೀತಿಯಿಂದ ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಕನಸು ಭಗ್ನಗೊಂಡಿದೆ. ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಮದುವೆಯನ್ನು ಚನ್ನಪಟ್ಟಣ ಮಧ್ಯ ಭಾಗದ ಜಾನಪದ ಲೋಕದಲ್ಲಿ ಮಾಡಲು ನಿಶ್ಚಯಿಸಿದ್ದರು. ರಾಜಕೀಯ ತವರೂರಾದ ರಾಮನಗರ ಮತ್ತು ಚನ್ನಪಟ್ಟಣ್ಣ ಭಾಗದ ಜನರ ಮಧ್ಯೆ ಪುತ್ರನ ಮದುವೆ ಮಾಡಲು ಕನಸು ಕಂಡಿದ್ದರು. ಆದರೆ ಇದೀಗ ಕೊರೊನಾ ಭೀತಿಯಿಂದಾಗಿ ಮದುವೆ ಸ್ಥಳಾಂತರ ತಯಾರಿ ಆರಂಭವಾಗಿದೆ.
ಜಾನಪದ ಲೋಕದಲ್ಲಿ ಮದುವೆ ತಯಾರಿ ಅದ್ದೂರಿಯಾಗಿ ನಡೆದಿತ್ತು. ಕಳೆದ ಒಂದು ತಿಂಗಳಿನಿಂದ ಮದುವೆ ಸ್ಥಳದ ಸಿದ್ದತಾ ಕಾಮಗಾರಿಗಳು ನಡೆದಿದ್ದವು. ಕೊರೊನಾ ವೈರಸ್ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮದುವೆಯನ್ನು ಚನ್ನಪಟ್ಟಣದಿಂದ ಬೆಂಗಳೂರಿಗೆ ಸ್ಥಳಾಂತರಿಸಲು ಎಚ್ಡಿಕೆ ಕುಟುಂಬ ಮುಂದಾಗಿದೆ. ಎಪ್ರಿಲ್ 17 ರಂದು ಮದುವೆ ನಿಶ್ಚಿಯವಾಗಿತ್ತು. ಅದಕ್ಕೆ ಪೂರಕವಾದ ತಯಾರಿ ಸಹ ನಡೆದಿತ್ತು. ಕೊರೊನಾ ಎಫೆಕ್ಟ್ ನಿಂದಾಗಿ ಮದುವೆ ನಡೆಯವ ಸ್ಥಳ ಬದಲಾಗಿದೆ. ಮದುವೆ ಸಿದ್ಧತೆಗೆ ಹಾಕಿದ್ದ ಶೆಟರ್ ಗಳನ್ನು ಕೆಲಸಾಗರರು ಖಾಲಿ ಮಾಡುತ್ತಿದ್ದಾರೆ.








