ವಿಜಯಪುರ: ಹೋಂ ಕ್ವಾರಂಟೈನ್‌ಗೆ ವೈದ್ಯರು ಸೂಚಿಸಿದ್ದರ ನಡುವೆಯೇ ಅಕ್ಕನ ಎಂಗೇಜ್‌ಮೆಂಟ್‌ನಲ್ಲಿ ಸಂಭ್ರಮದಿಕೊಂದ ಓಡಾಡಿಕೊಂಡಿದ್ದ ಯುವತಿಗೂ ಕೊರೊನಾ ಪಾಸಿಟಿವ್ ಬಂದಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ಯುವತಿಗೆ ಕೊರೊನಾ ಪಾಸಿಟಿವ್ ಇರುವುದು ತಿಳಿದಿರಲಿಲ್ಲ. ಹೀಗಾಗಿ ಎಂಗೇಜ್‌ಮೆAಟ್‌ಗೆ ಬಂದವರ ಜತೆ ಯುವತಿ ಆರಾಮಾಗಿ ಓಡಾಡಿಕೊಂಡಿದ್ದಳು. ಎಂಗೇಜ್‌ಮೆಂಟ್ ಬಂದಿದ್ದ 150ಕ್ಕೂ ಹೆಚ್ಚು ಮಂದಿಗೆ ಕೊರೊನಾ ಭೀತಿ ಶುರುವಾಗಿದೆ.
ನಿನ್ನೆ ಒಂದೇ ದಿನದಲ್ಲಿ ವಿಜಯಪುರದಲ್ಲಿ 39 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಈಗ ಯುವತಿಯ ಸಂಪರ್ಕದಿAದಾಗಿ ಕೊರೊನಾ ಪ್ರಕರಣಗಳು ಹೆಚ್ಚಾಗುವ ಆತಂಕ ಎದುರಾಗಿದೆ.
ಅಕ್ಕನ ನಿಶ್ಚಿತಾರ್ಥನ ಹಿಂದಿನ ದಿನ ಯುವತಿಗೆ ಕೆಮ್ಮು, ಶೀತ, ಜ್ವರ ಇದ್ದುದ್ದರಿಂದ ಆಸ್ಪತ್ರೆಗೆ ತಪಾಸಣೆ ಮಾಡಿಕೊಂಡಿದ್ದಳು. ಈ ವೇಳೆ ಬಾಲಕಿಗೆ ಚಿಕಿತ್ಸೆ ನೀಡಿ ಸ್ವ್ಯಾಬ್ ಕಲೆಕ್ಟ್ ಮಾಡಿಕೊಂಡು ಹೋಂ ಕ್ವಾರಂಟೈನ್ ಆಗುವಂತೆ ವೈದ್ಯರು ತಿಳಿಸಿದ್ದರು.
ಆದರೆ, ಮಾರನೇ ದಿನವೇ ಮನೆಯಲ್ಲಿ ಎಂಗೇಜ್‌ಮೆಂಟ್ ಫಿಕ್ಸ್ ಆಗಿತ್ತು. ಹೀಗಾಗಿ ಕಾರ್ಯಕ್ರಮದಲ್ಲಿ ಸಂಭ್ರಮದಿ0ದ ಓಡಾಡಿದ್ದಳು. ಅಕ್ಕನ ಎಂಗೇಜ್‌ಮೆಂಟ್ ಮಾರನೆ ದಿನ ವರದಿ ಬಂದಾಗ ಎಲ್ಲರಿಗೂ ಶಾಕ್ ಕಾದಿತ್ತು.
ವರದಿಯಲ್ಲಿ ಕರೋನಾ ಪಾಸಿಟಿವ್ ಧೃಢವಾಗಿದ್ದರಿಂದ 150ಕ್ಕೂ ಹೆಚ್ಚು ಮಂದಿಗೆ ಕೊರೊನಾ ಆತಂಕ ಶುರುವಾಗಿದೆ.
ಎಂಗೇಜ್‌ಮೆಂಟ್ ಬಂದವರನ್ನೆಲ್ಲ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಹುಡುಕುತ್ತಿದ್ದು ಬಾಲಕಿಯ ಸಂಪರ್ಕಕ್ಕೆ ಬಂದಿದ್ದವರಲ್ಲಿ ಈಗಾಗಲೇ 130 ಜನರ ಸ್ವ್ಯಾಬ್ ಕಲೆಕ್ಟ್ ಮಾಡಲಾಗಿದೆ. ಕೊರೊನಾ ಪಾಸಿಟಿವ್ ಬಂದ ಬಾಲಕಿಯ ಮನೆ ಸುತ್ತಲಿನ ಪ್ರದೇಶ ಸೀಲ್‌ಡೌನ್ ಮಾಡಲಾಗಿದೆ
ಚೋಕರ್ಸ್ ಅಲ್ಲ… ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..!
ಚೋಕರ್ಸ್ ಅಲ್ಲ... ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..! ದಕ್ಷಿಣ ಆಫ್ರಿಕಾ ಮತ್ತು ಕ್ರಿಕೆಟ್ ಆಟಕ್ಕೆ ಶತಶತಮಾನಗಳ ಇತಿಹಾಸವಿದೆ. ಟೆಸ್ಟ್ ಕ್ರಿಕೆಟ್‍ಗೆ ಮಾನ್ಯತೆ ಪಡೆದ ಮೂರನೇ ರಾಷ್ಟ್ರ...