ಭಾರತದಲ್ಲಿ ಕೊರೊನಾ ಆರ್ಭಟಕ್ಕೆ ದೇಶದದ ಜನರು ತತ್ತರಿಸಿಹೋಗಿದ್ದಾರೆ. ಲಾಕ್ ಡೌನ್ ಆಗಲಿ, ಕರ್ಫ್ಯೂ ಆಗಲಿ ಯಾವುದೇ ತಂತ್ರ ಕೊರೊನಾ ನಿರ್ಣಾಮ ಮಾಡುವಲ್ಲಿ ವರ್ಕೌಟ್ ಆದಂತೆ ಕಾಣುತ್ತಿಲ್ಲ. ಕೊರೊನಾ ಹಾವಳಿಗೆ ಈಗಾಗಲೇ ಹತ್ತಿರ ಹತ್ತಿರ ದೇಶದ 60 ಸಾವಿರ ಜನರ ಪ್ರಾಣ ಪಕ್ಷೆಯೇ ಹಾರಿಹೋಗಿದೆ. 30 ಲಕ್ಷಕ್ಕೂ ಅದಿಕ ಜನರಿಗೆ ಮಹಾಮಾರಿ ಒಕ್ಕರಿಸಿದೆ.
ಇನ್ನೂ ಕರುನಾಡಲ್ಲೂ ಕೊರೊನಾ ಆತಂಕ ದಿನಕಳೆದಂತೆಲ್ಲಾ ಹೆಚ್ಚಾಗುತ್ತಲೇ ಇದೆ. ಕರ್ನಾಟಕ ಸೋಂಕಿತರ ಸಂಖ್ಯೆಯಲ್ಲಿ 3 ನೇ ಸ್ಥಾನದಲ್ಲಿದೆ. ಇತ್ತ ಮಹಾರಾಷ್ಟ್ರ 1ನೇ ಸ್ತಾನದಲ್ಲಿದ್ರೆ, ಆಂಧ್ರ 2ನೇ ಸ್ಥಾನದಲ್ಲಿದೆ. ಇನ್ನೂ ಕೇವಲ ಜುಲೈ 22 ರಿಂದ ಆಗಸ್ಟ್ 22 ವರೆಗೆ ದೇಶದ ಈ 10 ರಾಜ್ಯಗಳಲ್ಲೀ ಕೊರೊನಾ ಅಟ್ಟಹಾಸ ಮಿತಿ ಮೀರಿದೆ. ಕೇಂದ್ರ ಆರೋಗ್ಯ ಇಲಾಖೆಯ ಈ ವರದಿ ದೇಶದ ಜನರನ್ನ ಬೆಚ್ಚಿ ಬೀಳಿಸಿದೆ.
ಜುಲೈ 22ರಿಂದ ಆಗಸ್ಟ್ 22 ರ ವೇಳೆ ( 1ತಿಂಗಳ ಅಂತರ)ಗೆ ಪತ್ತೆಯಾದ ಹೊಸ ಕೇಸ್ ಗಳು, ಗ್ರೋತ್ ರೇಟ್..!
10 ರಾಜ್ಯಗಳ ಪಟ್ಟಿ ಹೀಗಿದೆ.
- ಮಹಾರಾಷ್ಟ್ರ : 3,20,329 – ಗ್ರೋತ್ ರೇಟ್ – 95 %
- ಆಂಧ್ರಪ್ರದೇಶ : 2,70,076 – ಗ್ರೋತ್ ರೇಟ್ – 417 %
- ಕರ್ನಾಟಕ : 1,88,527 – ಗ್ರೋತ್ ರೇಟ್ – 249 %
- ತಮಿಳುನಾಡು : 1,80,929 – ಗ್ರೋತ್ ರೇಟ್ – 97%
- ಉತ್ತರಪ್ರದೇಶ : 1,21,570 – ಗ್ರೋತ್ ರೇಟ್ – 219%
- ಬಿಹಾರ್ : 87,076 – ಗ್ರೋತ್ ರೇಟ್ – 287%
- ಪಶ್ಚಿಮ ಬಂಗಾಳ: 82,995 – ಗ್ರೋತ್ ರೇಟ್ – 168%
- ಅಸ್ಸಾಂ : 61,015 – ಗ್ರೋತ್ ರೇಟ್ – 228%
- ಒಡಿಶಾ : 53,083 – ಗ್ರೋತ್ ರೇಟ್ – 268%
- ತೆಲಂಗಾಣ : 52,099 – ಗ್ರೋತ್ ರೇಟ್ – 106%
ಈ ಪಟ್ಟಿಗೆ ಸೇರುವ ಮೊದಲ ಹೆಸರು ಮಹರಾಷ್ಟ್ರ
ಮಹಾರಾಷ್ಟ್ರದಲ್ಲಿ ಕೊರೊನಾ ಮಹಾಸ್ಫೋಟವೇ ಆಗಿದೆ. ಸೋಂಕಿತರ ಸಂಖ್ಯೆಯಲ್ಲಿ ಅಗ್ರ ಸ್ತಾನದಲ್ಲಿರುವ ಮಹಾರಾಷ್ಟ್ರದಲ್ಲಿ ಈಗಾಗಲೇ 6 ಲಕ್ಷ 50 ಸಾವಿರದ ಗಡಿ ದಾಟಿದೆ ಸೋಂಕಿತರ ಸಂಖ್ಯೆ. ಆದರೆ ಕೇವಲ ಒಂದೇ ತಿಂಗಳ ಅಂತರದಲ್ಲಿ ಹೊಸದಾಗಿ 3, 20, 329 ಹೊಸ ಕೇಸ್ ಗಳು ದಾಖಲಾಗಿದೆ. ಅಂದರೆ ಒಂದೇ ತಿಂಗಳಲ್ಲಿ 95 % ಗ್ರೋತ್ ರೇಟ್ ಆಗಿದೆ.
ಇನ್ನೂ ಕರುನಾಡಲ್ಲೂ ರಕ್ಕಸನ ರಣಕೇಕೆ ಜೋರಾಗಿಯೇ ಇದೆ.
ಕರ್ನಾಟಕದಲ್ಲೀ ಈಗಾಗಲೇ ಸೋಂಕಿತರ ಸಂಖ್ಯೆ 2ಲಕ್ಷದ 60 ಸಾವಿರದ ಗಡಿ ದಾಟಿದೆ. ಕೇವಲ ಒಂದೇ ತಿಂಗಳ ಅಂತರದಲ್ಲಿ ಹೊಸದಾಗಿ ಬರೋಬ್ಬರಿ 1. 88 ಸಾವಿರದ 527 ಹೊಸಕೇಸ್ ಗಳು ದಾಖಲಾಗಿರುವುದು ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದೆ.