ಮಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸೋಂಕು ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ನಾನಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅದರಂತೆ ಇದೀಗ ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ಪರೀಕ್ಷೆ ನಡೆಸುವ ಲ್ಯಾಬ್ ಇಂದಿನಿಂದ ಕಾರ್ಯಾರಂಭವಾಗಲಿದೆ. ಕೊರೊನಾ ಶಂಕಿತರು ಅಥವಾ ಸೋಂಕಿತರ ಮಾದರಿಯನ್ನ ಪರೀಕ್ಷಿಸಿ ಶೀಘ್ರ ವರದಿ ನೀಡಲಾಗುತ್ತದೆ.
ಈವರೆಗೂ ಸ್ಯಾಂಪಲ್ ಪರೀಕ್ಷೆಗೆ ಹಾಸನ ಹಾಗೂ ಬೆಂಗಳೂರನ್ನು ಅವಲಂಭಿಸಲಾಗಿತ್ತು. ಇಂದಿನಿಂದ ಮಂಗಳೂರಲ್ಲೇ ಟೆಸ್ಟ್ ನಡೆಸಿ ವರದಿ ನೀಡಲು ತರಬೇತಿ ಪಡೆದ ತಂಡ ಸಜ್ಜಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಫೇಸ್ ಬುಕ್ ನಲ್ಲಿ ಮಾಹಿತಿ ನೀಡಿದ್ದಾರೆ.








