ಸ್ಥಳೀಯ ತಪ್ಪುಗಳಿಗೆ ಸರ್ಕಾರ ಮುಜಗರ ಅನುಭವಿಸಬೇಕಾಗಿದೆ : ಸುಧಾಕರ್ 

1 min read
Bidar

ಸ್ಥಳೀಯ ತಪ್ಪುಗಳಿಗೆ ಸರ್ಕಾರ ಮುಜಗರ ಅನುಭವಿಸಬೇಕಾಗಿದೆ : ಸುಧಾಕರ್

ಬೀದರ್ : ಸ್ಥಳೀಯವಾಗಿ ಮಾಡುವ ಅವಾಂತರಗಳಿಗೆ ಸರ್ಕಾರ ಮುಜುಗರ ಅನುಭವಿಸಬೇಕಾಗಿದೆ. ಇನ್ನು ಮುಂದೆ ಇಂತಹ ನಿರ್ಲಕ್ಷ್ಯವನ್ನು ಸಹಿಸಲು ಆಗುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಎಚ್ಚರಿಕೆ ನೀಡಿದರು.

ರೆಮಿಡ್ವೆಜರ್, ಹಾಸಿಗೆ, ಆಕ್ಸಿಜನ್ ಸಹಿತ ಇತರೆ ವಿಷಯದಲ್ಲಿ ಡಿಎಚ್ಒ ಅವರ ಬಳಿಯೇ ಮಾಹಿತಿ ಇಲ್ಲದ್ದನ್ನು ಕಂಡ ಸಚಿವರು, ಕೆಂಡಾಮಂಡಲರಾಗಿ ಜವಾಬ್ದಾರಿ ಹುದ್ದೆಯಲ್ಲಿದ್ದು ಇದೇ ರೀತಿ ಮುಂದುವರಿದರೆ ಅಮಾನತು ಮಾಡಬೇಕಾಗುಹತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಕೋವಿಡ್ ಸ್ಥಿತಿಯನ್ನು ಶನಿವಾರ ಪರಾಮರ್ಶೆ ನಡೆಸಿ ಈ ಸೂಚನೆ ನೀಡಿದರು.

ಸರಕಾರ ನೀಡಿರುವ ಮಾರ್ಗಸೂಚಿ ಮತ್ತು ಸೂಚನೆಗಳನ್ನು ಸರಿಯಾಗಿ ಪಾಲಿಸಿಲ್ಲ. ಆಸ್ಪತ್ರೆ ಹೊರಭಾಗದ ಪ್ರಕಟಣಾ ಫಲಕದಲ್ಲಿ ಎಲ್ಲಾ ಮಾಹಿತಿ ಪ್ರಕಟಿಸುವಂತೆ ತಾಕೀತು ಮಾಡಿದ್ದರೂ ಜಿಮ್ಸ್ ಮುಂದೆ ಯಾವುದೇ ಮಾಹಿತಿ ಇಲ್ಲ. ಖಾಸಗಿಯವರ ಬಳಿ ಶೇಕಡಾ 75 ಹಾಸಿಗೆ ತೆಗೆದುಕೊಳ್ಳಲು ಸೂಚನೆ ನೀಡಿದ್ದರೂ ಪಾಲನೆ ಮಾಡಿಲ್ಲ. ನಿಮ್ಮ ಕೈಯಲ್ಲಿ ಈ ಕೆಲಸ ಬೇರೆಯವರಿಂದ ಮಾಡಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಜಿಮ್ಸ್ ನಿರ್ದೇಶಕರಿಗೆ ಎಚ್ಚರಿಕೆ ನೀಡಿದರು.

Bidar

ಖಾಸಗಿ ಆಸ್ಪತ್ರೆಗಳು ಹಾಸಿಗೆಗಳ ಸಂಖ್ಯೆ ಕುರಿತು ಸುಳ್ಳು ಮಾಹಿತಿ ನೀಡಿದರೆ ಸಹಿಸುವುದಿಲ್ಲ. ಕೆಪಿಎಂಇ ನೋಂದಣಿ ವೇಳೆ ನಮ್ಮ ಬಳಿ ಎಲ್ಲಾ ಮಾಹಿತಿ ಇರುತ್ತದೆ. ಮೋಸ ಮಾಡಲು ಆಗುವುದಿಲ್ಲ ಎಂದರು.

ತುರ್ತು ಇರುವ ಚಿಕಿತ್ಸೆ ಹೊರತುಪಡಿಸಿ ಉಳಿದ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಗಳನ್ನು ಮುಂದೂಡಲು ಜಿಲ್ಲಾಡಳಿತ ಸೂಚನೆ ನೀಡಬೇಕು. ಆರೋಗ್ಯ ಇಲಾಖೆ ವೈದ್ಯರು ಮತ್ತು ಸಿಬ್ಬಂದಿ ಪರಿಸ್ಥಿತಿಯನ್ನು ಅರಿತು ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕಿವಿ ಮಾತು ಹೇಳಿದರು.

ಆಕ್ಸಿಜನ್ ಬಳಕೆಯಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಅರ್ಹ ಸೋಂಕಿತರನ್ನು ಮಾತ್ರ ದಾಖಲು ಮಾಡಬೇಕು. ಉಳಿದವರಿಗೆ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ನೀಡಬೇಕು. ಅವರಿಗೆ ಆತಂಕ ಎದುರಾಗದಂತೆ ಕೌನ್ಸೆಲಿಂಗ್ ಮಾಡುವ ಜತೆಗೆ, ಮೆಡಿಕಲ್ ಕಿಟ್ ನೀಡಬೇಕು ಎಂದು ಸೂಚನೆ ನೀಡಿದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd