ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಿಲ್ಲದ ಕೊರೊನಾ ಮರಣಮೃದಂಗ corona virus
ಬೆಳಗಾವಿ : ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೊರೊನಾ ಮರಣಮೃದಂಗ ಮುಂದುವರೆದಿದೆ. ನಿನ್ನೆ 18 ಜನರು ಕೊರೊನಾಗೆ ಬಲಿಯಾಗಿದ್ದಾರೆ.
ಬೀಮ್ಸ್ ಆಸ್ಪತ್ರೆಯಲ್ಲಿ 6 ಜನರು ಸಾವನ್ನಪ್ಪಿದ್ದು, ಇತರೆ ಆಸ್ಪತ್ರೆಯಲ್ಲಿ 12 ಜನರು ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ತಗ್ಗುತ್ತಿದ್ದರೂ ಸಾವುಗಳು ಸಂಖ್ಯೆ ಕಡಿಮೆಯಾಗುತ್ತಿಲ್ಲ.
ಈವರೆಗೂ ಜಿಲ್ಲೆಯಲ್ಲಿ 621 ಜನರು ಕೊರೊನಾಗೆ ಕೊನೆಯುಸಿರೆಳೆದಿದ್ದಾರೆ.
ಈ ಮಧ್ಯೆ ನಿನ್ನೆ ಜಿಲ್ಲೆಯಲ್ಲಿ 847 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 11 ಸಾವಿರಕ್ಕೂ ಅಧಿಕ ಆಕ್ಟಿವ್ ಕೇಸಗಳಿವೆ.
ಇನ್ನು ಕೊರೊನಾಗೆ ಕಡಿವಾಣ ಹಾಕಲು ಇಂದು ಕೂಡಾ ಬೆಳಗಾವಿಯಲ್ಲಿ ಟೈಟ್ ಲಾಕ್ ಡೌನ್ ಮಾಡಲಾಗಿದೆ.
ಹಾಲು, ಔಷಧಿ, ಆಸ್ಪತ್ರೆಗೆ ಹೋಗಲು ಮಾತ್ರ ಅವಕಾಶ ನೀಡಲಾಗಿದೆ. ನಗರದ ಚೆನ್ನಮ್ಮ ವೃತ್ತ ಸೇರಿ ಪ್ರಮುಖ ವೃತ್ತದಲ್ಲಿ ಪೆÇಲೀಸರಿಂದ ತಪಾಸಣೆ ಮುಂದುವರೆದಿದೆ.