“ಕೊರೊನಾ ತಡೆಗೆ ಮಾಸ್ಕ್ ಬೇಕಿಲ್ವಾ” : ಡಾಕ್ಟ್ರೇ ಇದೆಂಥಾ ವಿತಂಡವಾದ..? corona virus
ಬೆಂಗಳೂರು : ಇಡೀ ಪ್ರಪಂಚದಾದ್ಯಂತ ಕೊರೊನಾ ಹುಚ್ಚು ಕುದುರೆ ಓಟ ಮುಂದುವರೆದಿದೆ. ಹೆಮ್ಮಾರಿ ವೈರಸ್ ಸಿಕ್ಕ ಸಿಕ್ಕವರ ದೇಹ ಹೊಕ್ಕಿ ಮರಣ ಮೃದಂಗ ಬಾರಿಸುತ್ತಿದೆ.
ಕೊರೊನಾದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ ಎಂದು ವೈದ್ಯರು ಪದೇ ಪದೇ ಹೇಳುತ್ತಿದ್ದಾರೆ.
ಸರ್ಕಾರಗಳು ಕೂಡ ಮಾಸ್ಕ್ ಧರಿಸುವಂತೆ ಮನವಿ ಮಾಡಿಕೊಳ್ಳುತ್ತಲೇ ಇದ್ದಾರೆ. ಈ ಮಧ್ಯೆ ಬೆಂಗಳೂರಿನ ಇಬ್ಬರು ವೈದ್ಯರು ಕೊರೊನಾ ತಡೆಗೆ ಮಾಸ್ಕ್ ಬೇಕಿಲ್ಲ ಎಂಬ ವಿತಂಡವಾದ ಮಾಡಿದ್ದಾರೆ.
ನಗರದ ಖ್ಯಾತ ವೈದ್ಯ ಡಾ. ಬಿ.ಎಸ್. ಕಕ್ಕಿಲ್ಲಾಯ ಸೂಪರ್ ಮಾರ್ಕೆಟ್ ನಲ್ಲಿ ಮಾಸ್ಕ್ ಹಾಕುವ ವಿಚಾರದಲ್ಲಿ ಅಲ್ಲಿನ ಸಿಬಂದಿ ಜೊತೆ ವಾಗ್ವಾದ ಮಾಡಿ ಮುಜುಗರಕ್ಕೀಡಾಗಿದ್ದಾರೆ.
ಕಕ್ಕಿಲ್ಲಾಯರು ಸೂಪರ್ ಮಾರ್ಕೆಟಿಗೆ ದಿನಸಿ ವಸ್ತುಗಳ ಖರೀದಿಗಾಗಿ ತೆರಳಿದ್ದು, ಮುಖಕ್ಕೆ ಮಾಸ್ಕ್ ಹಾಕದೇ ಬಂದಿದ್ದ ವೈದ್ಯರಲ್ಲಿ ಮಾಸ್ಕ್ ಹಾಕಿ ಬರುವಂತೆ ಅಲ್ಲಿನ ಸಿಬಂದಿ ಸೂಚಿಸಿದರು.
ಅದರೆ, ನಾನು ಮಾಸ್ಕ್ ಹಾಕಲ್ಲ. ಮಾಸ್ಕ್ ಯಾಕೆ ಹಾಕಬೇಕು. ಮಾಸ್ಕ್ ನಿಂದ ಕೊರೊನಾ ಎದುರಿಸಲು ಸಾಧ್ಯವಿಲ್ಲ ಎಂದು ಹೇಳ್ಕೊಂಡು ಬಂದವನು ನಾನು. ಈಗ ನಾನೇ ಮಾಸ್ಕ್ ಹಾಕಬೇಕಾ ಎಂದು ವಾದ ಮಾಡಿದ್ದಾರೆ.
ಇನ್ನೊಂದು ಕಡೆ ಕೊರೊನಾ ಸೋಂಕಿತರಿಗೆ ಮಾಸ್ಕ್ ಬೇಕಿಲ್ಲ. ಸ್ಯಾನಿಟೈಸರ್ ಹಾಕಬೇಕಿಲ್ಲ ಎಂದು ವೈದ್ಯ ಡಾ. ರಾಜು ಕೃಷ್ಣಮೂರ್ತಿ ಸ್ಥಳೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ಇಬ್ಬರ ನಡೆ ಈಗ ಸಾಕಷ್ಟು ಟೀಕೆಗೆ ಒಳಗಾಗುತ್ತಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿಟ್ಟು, ಇನ್ನೊಬ್ಬರಿಗೆ ಮಾರ್ಗದರ್ಶನ ನೀಡಬೇಕಿರುವ ವೈದ್ಯರಾಗಿ ಈ ರೀತಿ ಮೊಂಡು ವಾದ ಮಾಡುವುದು ಎಷ್ಟು ಸರಿ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.