ರಾಜ್ಯದಲ್ಲಿ ಎಲ್ಲೂ ಆಕ್ಸಿಜನ್ ಕೊರತೆಯಾಗಿಲ್ಲ : ಡಾ.ಕೆ.ಸುಧಾಕರ್
ಬೆಂಗಳೂರು : ರಾಜ್ಯದಲ್ಲಿ 48 ಗಂಟೆಯಲ್ಲಿ ಎಲ್ಲೂ ಆಕ್ಸಿಜನ್ ಕೊರತೆಯಾಗಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಆಕ್ಸಿಜನ್ ಇಲ್ಲದೆ ಸೋಂಕಿತರು ಮೃತಪಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.
ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಧಾಕರ್, ಜನರು ಆತ್ಮವಿಶ್ವಾಸದಿಂದ ಇರಿ ಸರ್ಕಾರ ನಿಮ್ಮ ಜೊತೆಗೆ ಇದೆ.
ಮುಖ್ಯಮಂತ್ರಿಯಿಂದ ಕಟ್ಟಕಡೆಯ ಅಧಿಕಾರಿಗಳು ನಿಮ್ಮ ಜೊತೆಗೆ ಇರುತ್ತೇವೆ. ನಿಮ್ಮ ಆರೋಗ್ಯ ನಿಮ್ಮ ಜೊತೆಗೆ ನಾವಿದ್ದೇವೆ.
ರಾಜ್ಯದಲ್ಲಿ 48 ಗಂಟೆಯಲ್ಲಿ ಎಲ್ಲೂ ಆಕ್ಸಿಜನ್ ಕೊರತೆಯಾಗಿಲ್ಲ ಎಂದು ಹೇಳಿದರು.
ಇನ್ನು ರಾಜ್ಯದಲ್ಲಿ 47*7 ಕಾಲ್ ಸೆಂಟರ್ ತೆರೆಯಲಾಗಿದೆ. 2000 ಐಸಿಯು ಮಾಡಿಲರ್ ಐಸಿಯು ಬೆಂಗಳೂರಿನ 8 ವಲಯದಲ್ಲಿ ಕಾರ್ಯರಂಭವಾಗಲಿದ್ದು, ಆಕ್ಸಿಜನ್ ಕೊಡುವ ತಂತ್ರಜ್ಞಾನ ಒಂದು ವಾರದಲ್ಲಿ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ.
ರೋಗದ ಲಕ್ಷಣಗಳು ಕಂಡ ಕೂಡಲೇ ಟೆಸ್ಟ್ ಮಾಡಿಸಿ ವೈದ್ಯರ ಸಲಹೆ ಪಡೆಯಿರಿ. ನಮ್ಮ ಲಸಿಕೆ ಉತ್ತಮ ಕೆಲಸ ಮಾಡುತ್ತಿದೆ.
ಎಲ್ಲರನ್ನ ರಕ್ಷಣೆ ಮಾಡುವ ಕೆಲಸ ನಡೆಯುತ್ತಿದೆ. ಕೊರೊನಾ ಪಾಸಿಟಿವ್ ಬಂದ್ರೆ ಹೆದರಬೇಡಿ, ಧೃತಿಗೆಡಬೇಡಿ ಧೈರ್ಯದಿಂದ ಇರಿ ಎಂದು ಜನರಲ್ಲಿ ಧೈರ್ಯದ ಮಾತುಗಳನ್ನಾಡಿದರು.