ಮುಂಬೈ : ಕೊರೊನಾ.. ಕೊರೊನಾ.. ಸದ್ಯ ವಿಶ್ವದಾದ್ಯಂತ ಇದರದ್ದೇ ಜಪ. ಹೆಮ್ಮಾರಿ ವೈರಸ್ ಗೆ ಈಗಾಗಲೇ ಸಾಕಷ್ಟು ಮಂದಿ ಮೃತಪಟ್ಟಿದ್ದಾರೆ. ಲಕ್ಷಾಂತರ ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಇನ್ನು ಭಾರತದಲ್ಲೂ ಕೊರೊನಾ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರ ಮಧ್ಯೆ ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಕೊರೊನಾ ವೈರಸ್ ಹೆಸರಿನ ತಮ್ಮ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ್ದು, ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿರುವ ಆರ್‌ಜಿವಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿಕೊಂಡು ಚಿತ್ರೀಕರಣ ನಡೆಸಿರುವುದಾಗಿ ತಿಳಿಸಿದ್ದಾರೆ. ಇನ್ನು ಆರ್ ಜಿ ವಿ ಟ್ವೀಟ್ ನಲ್ಲಿ.. ಇದು ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಚಿತ್ರ ಎಂದು ವರ್ಮಾ ಹೇಳಿದ್ದು, ಅವರು ಮನೆಯಲ್ಲೇ ಇದ್ದು ತಾರೆಯರು ಆಹಾರ ತಯಾರಿಸುತ್ತಿರುವಾಗ, ಪಾತ್ರೆ ತೊಳೆಯುತ್ತಿರುವಾಗ ಮತ್ತು ಬಟ್ಟೆ ಒಣಗಿಸುತ್ತಿರುವಾಗ ನಾನು ವಿಡಿಯೋ ಮಾಡಿದ್ದೇನೆ ಎಂದಿದ್ದಾರೆ. ಇನ್ನು ಟ್ರೈಲರ್ ನಲ್ಲಿ ಮಹಿಳೆಯೊಬ್ಬಳು ತೀವ್ರವಾಗಿ ಕೆಮ್ಮುತ್ತಿರುವುದು ಮತ್ತು ಅವಳಿಂದ ಕೊರೊನಾ ಹರಡಬಹುದೆಂದು ಕುಟುಂಬಸ್ಥರು ಆತಂಕಪಡುವ ದೃಶ್ಯಗಳನ್ನು ತೋರಿಸಲಾಗಿದೆ.








