ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಸಿಗುತ್ತಾ..? ಸಿಗಲ್ವಾ..?
ಬೆಂಗಳೂರು : ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಸಿಗುತ್ತೆ ಅಂತಾ ಸರ್ಕಾರ ಹೇಳಿತ್ತು. ಆದ್ರೆ ಇದೀಗ ಅದನ್ನ ಒಂದು ವಾರ ಮುಂದೂಡುವ ಸಾಧ್ಯತೆಗಳಿವೆ. ಅಂದ್ರೆ ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಸಿಗೋದು ಅನುಮಾನ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇದೀಗ ಸಚಿವ ಸಿಸಿ ಪಾಟೀಲ್ ಅವರು ಸ್ಪಷ್ಟನೆ ನೀಡಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 18 ವರ್ಷ ಮೇಲ್ಪಟ್ಟವರಿಗೆ ಮೇ 1 ರಿಂದ ಲಸಿಕೆ ಹಾಕಲ್ಲ. ಒಂದು ವಾರ ಮುಂದೂಡುವ ಸಾಧ್ಯತೆ ಇದೆ ಎಂದಿದ್ದಾರೆ.
ಮುಂದುವರೆದು ಇಡೀ ರಾಜ್ಯಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದು ತಡವಾಗಲಿದೆ. 1 ಮತ್ತು 2ನೇ ಹಂತದ ಲಸಿಕೆ ಮುಗಿಯಬೇಕಿದೆ. ನೋಂದಣಿ ಮಾಡಲಾಗುತ್ತಿದೆ. ಮೇ 18 ರಿಂದ 20ರವರೆಗೆ ಹೋಗಬಹುದು. ಅಷ್ಟರಲ್ಲಿ ಇನ್ನಷ್ಟು ಡೋಸ್ ಸಂಗ್ರಹಿಸಿ ಮುಂದೆ ದಿನಾಂಕ ನಿಗದಿಯಾದ ನಂತರ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದಾಗಿ ಹೇಳಿದರು.










