ಹೆಂಡತಿಗೆ ಕೊರೊನಾ ; ಭಯದಲ್ಲಿ ಹೆಣವಾದ ಗಂಡ
ಚಿತ್ರದುರ್ಗ : ಹೆಂಡತಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ರಂಗನಾಥಪುರ ಗ್ರಾಮದಲ್ಲಿ ನಡೆದಿದೆ.
32 ವರ್ಷದ ರಾಜು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯಾಗಿದ್ದಾರೆ. ರಂಗನಾಥಪುರದ ನಿವಾಸಿಯಾಗಿರುವ ರಾಜು ಪತ್ನಿ ರಶ್ಮಿಗೆ ಮೇ 27 ರಂದು ಕೊರೊನಾ ಸೋಂಕು ಪತ್ತೆಯಾಗಿತ್ತು. ಹೀಗಾಗಿ ಭಯಭೀತನಾದ ರಾಜು ತನ್ನ ಜಮೀನಿನಲ್ಲಿ ಆತ್ಮಹತ್ಯಗೆ ಶರಣಾಗಿದ್ದಾನೆ.
ಕೊರೊನಾ ಪಾಸಿಟಿವ್ ಬಂದ ರಶ್ಮಿ ಅವರನ್ನು ದೇವರಕೊಟ್ಟ ಗ್ರಾಮದಲ್ಲಿರುವ ಕೋವಿಡ್ ಕೇರ್ ಕೇಂದ್ರಕ್ಕೆ ಸೇರಿಸಲಾಗಿತ್ತು.
ರಾಜು ಕೋವಿಡ್ ಟೆಸ್ಟ್ ರಿಪೋರ್ಟ್ ನೆಗಟಿವ್ ಬಂದಿತ್ತು. ಆದರೂ ತೀವ್ರ ಗಾಬರಿಗೊಂಡಿರುವ ರಾಜು ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಸಂಬಂಧ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.