ಮದುವೆಯಾದ ಎರಡು ದಿನಕ್ಕೆ ವರ ಕೊರೋನಾಗೆ ಬಲಿ-ವರನಿಂದ ಜನಸಮೂಹಕ್ಕೆ ಪಸರಿಸಿದ ಕೊರೊನಾ

ಮದುವೆಯಾದ ಎರಡು ದಿನಕ್ಕೆ ವರ ಕೊರೋನಾಗೆ ಬಲಿ-ವರನಿಂದ ಜನಸಮೂಹಕ್ಕೆ ಪಸರಿಸಿದ ಕೊರೊನಾ

ಪಾಟ್ನಾ, ಜುಲೈ 1: ಹದಿನೈದು ದಿನಗಳ ಹಿಂದೆ ಪಾಟ್ನಾ ಜಿಲ್ಲೆಯ ಪಾಲಿಗಂಜ್ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದ ವರ ಕೊರೊನಾ ‌ಸೋಂಕಿನಿಂದ ಮೃತಪಟ್ಟಿದ್ದು, ಆತನಿಂದಾಗಿ ಜನಸಮೂಹಕ್ಕೆ ಕೊರೊನಾ ಸೋಂಕು ಹರಡಿರುವುದು ವರದಿಯಾಗಿದೆ.
ಹದಿನೈದು ದಿನಗಳ ಹಿಂದೆ ಪಾಟ್ನಾ ಜಿಲ್ಲೆಯ ಪಾಲಿಗಂಜ್ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವರನಿಗೆ ತೀವ್ರ ಜ್ವರ ಬರುತ್ತಿದ್ದರೂ ಆತ ಅದನ್ನು ನಿರ್ಲಕ್ಷ್ಯ ಮಾಡಿ ಮದುವೆಯಾಗಿದ್ದ. ಮದುವೆಯಾಗಿ ಎರಡು ದಿನವಾದ ಬಳಿಕ ಮದುಮಗ ಸಾವನ್ನಪ್ಪಿದ್ದು, ಅವನಿಗೆ ಕೊರೋನಾ ಸೋಂಕು ಪರೀಕ್ಷಿಸದೆ ಅಂತ್ಯಕ್ರಿಯೆ ಮಾಡಲಾಗಿತ್ತು. ಈ ಮದುವೆ ಸಮಾರಂಭದಿಂದಾಗಿ ಬಿಹಾರದಲ್ಲಿ ದೊಡ್ಡ ಸಂಖ್ಯೆಯ ಜನಸಮೂಹಕ್ಕೆ ಕೊರೋನಾ ‌ಸೋಂಕು ಪಸರಿಸಿರುವುದು ವರದಿಯಾಗಿದೆ

Marriage
ಬಿಹಾರದಿಂದ 55 ಕಿ.ಮೀ ದೂರದಲ್ಲಿರುವ ಪಾಟ್ನಾ ಜಿಲ್ಲೆಯ ಪಾಲಿಗಂಜ್ ಗ್ರಾಮದಲ್ಲಿ 100 ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರ ಸಂಪರ್ಕದಿಂದ 350 ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮದುವೆಗೆ ಹಾಜರಾಗಿದ್ದ ಅವರ ಹದಿನೈದು ಸಂಬಂಧಿಕರಿಗೆ ಕೊರೊನಾ ಸೋಂಕು ತಗುಲಿದ್ದು, ಅವರಿಂದ ಇತರರಿಗೆ ಸೋಂಕು ತಗುಲಿದೆ.

ಗುರುಗ್ರಾಮದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ 30 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಿದ್ದರೂ ಆತ ಅದನ್ನು ನಿರ್ಲಕ್ಷ್ಯ ಮಾಡಿ ಕೊರೊನಾ ಪರೀಕ್ಷೆಯನ್ನು ಮಾಡಿಸದೇ ಮದುವೆಗೆ ಹಾಜರಾಗಿದ್ದ.‌ ಮದುವೆ ಸಮಯದಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಂಡರು ಕೂಡ ಮನೆ ಮಂದಿಯೂ ಈ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ಮದುವೆಯಾಗಿ ಎರಡು ದಿನಗಳ ಬಳಿಕ ತೀವ್ರ ಜ್ವರದಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ ಮದುಮಗನನ್ನು ಏಮ್ಸ್ ಆಸ್ಪತ್ರೆಗೆ ಕರೆದೊಯ್ಯುವಾಗ ಆತ ಸಾವನ್ನಪ್ಪಿದ್ದಾನೆ.‌ ಬಳಿಕ ಆತನಿಗೆ ಕೊರೋನಾ ಸೋಂಕು ಪರೀಕ್ಷಿಸದೆ ಅಂತ್ಯಕ್ರಿಯೆ ಮಾಡಲಾಗಿತ್ತು.
ಈ ವಿಷಯ ಬಹಿರಂಗವಾಗುತ್ತಿದ್ದಂತೆ ಮದುವೆಯಲ್ಲಿ ಪಾಲ್ಗೊಂಡ ಹತ್ತಿರದ ಸಂಬಂಧಿಕರನ್ನು ಮೊದಲು ಪರೀಕ್ಷೆಗೆ ಒಳಪಡಿಸಲಾಗಿದೆ. ಅವರಿಗೆಲ್ಲಾ ಕೊರೊನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಮದುವೆಗೆ ಬಂದವರನ್ನೆಲ್ಲ ಪರೀಕ್ಷೆಗೆ ಒಳಪಡಿಸಿದ್ದು, 95 ಜನರಿಗೆ ಕೊರೊನಾ ತಗುಲಿರುವುದು ಪತ್ತೆಯಾಗಿದೆ. ಮದುಮಗಳಿಗೆ ಕೊರೊನಾ ನೆಗೆಟಿವ್ ಎಂದು ವರದಿ ಬಂದಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This