ಕೋವಿಡ್ XE ಎಂದರೇನು ? ರೂಪಾಂತರದ ಲಕ್ಷಣಗಳೇನು ?
ಮುಂಬೈ ಮತ್ತು ಗುಜರಾತ್ ನಲ್ಲಿ ಕೋವಿಡ್ XE ಹೈಬ್ರೀಡ್ ರೂಪಾಂತರ ಕಂಡು ಬಂದ ನಂತರ ಎಕ್ಸ್ ಇ ಬಗ್ಗೆ ಹುಡುಕಾಟ ಶುರುವಾಗಿದೆ. XE ಹೈಬ್ರೀಡ್ ರೂಪಾಂತರ ಎರಡು ವಿಭಿನ್ನ ರೀತಿಯ ವೈರಸ್ ನ ಸಂಯೋಜನೆಯಾಗಿದೆ ಎಂದು (ವಿಶ್ವ ರೋಗ್ಯ ಸಂಸ್ಥೆ) WHO ಒಪ್ಪಿಕೊಂಡಿದೆ. Omicron BA.1 ಮತ್ತು Omicron BA.2 ಉಪ ರೂಪಾಂತರದ ಸಂಯೋಜನೆಯಿಂದ ಈ ವೈರಸ್ ರಚನೆಯಾಗಿದೆ. ಒಬ್ಬ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಸೋಂಕು ಕಾಣಿಸಿಕೊಂಡಾಗ ಇಂಥಹ ಸಂಯೋಜನೆಗಳು ರೂಪುಗೊಳ್ಳುತ್ತವೆ.
ಇತ್ತೀಚೆಗೆ, ಕರೋನದ ಇತರ ರೂಪಾಂತರಗಳೊಂದಿಗೆ ಸಂಯೋಜಿಸಲ್ಪಟ್ಟ ಈ ರೂಪಾಂತರಗಳು ಹೆಚ್ಚು ಮಾರಕವಲ್ಲ ಮತ್ತು ಬೇಗನೆ ಸಾಯುತ್ತವೆ ಎಂದು UK ಆರೋಗ್ಯ ಏಜೆನ್ಸಿಯಾದ NHS ನ ಮುಖ್ಯ ವೈದ್ಯಕೀಯ ಸಲಹೆಗಾರರಾದ ಸುಸಾನ್ ಹಾಪ್ಕಿನ್ಸ್ ಹೇಳಿದ್ದಾರೆ. XE ಪ್ರಕರಣಗಳು ಬಹಳ ಅಪರೂಪವಾಗಿರುವುದರಿಂದ ಕಡಿಮೆ ಮಾರಣಾಂತಿಕವಾಗಿದೆ ಎಂದು ಅಂದಾಜಿಸಬಹುದು.
XE ರೂಪಾಂತರವನ್ನು ಮೊದಲು ಬ್ರಿಟನ್ ನಲ್ಲಿ ಕಂಡುಹಿಡಿಯಲಾಯಿತು. ಇದುವರೆಗೆ ಒಟ್ಟು 637 ಪ್ರಕರಣಗಳನ್ನು ದಾಖಲಾಗಿವೆ. ಸಾಕಷ್ಟು ಪುರಾವೆಗಳಿಲ್ಲದ ಕಾರಣ ಇದು ಎಷ್ಟು ಮಾರಕ ಮತ್ತು ಎಷ್ಟು ಹಾನಿ ಉಂಟುಮಾಡಬಹುದು ಎಂದು ಹೇಳಲು ಸಾಧ್ಯವಿಲ್ಲ ಎಂದು WHO ಹೇಳಿದೆ.
ಆದರೆ XE ರೂಪಾಂತರವು ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು WHO ವರದಿ ಮಾಡಿದೆ. ಇದು ಮೂಲ ಓಮಿಕ್ರಾನ್‌ಗಿಂತ 10 ಪಟ್ಟು ವೇಗವಾಗಿ ಹರಡುತ್ತದೆ ಎಂದು ಹೇಳಿದೆ.
XE ರೂಪಾಂತರದ ಲಕ್ಷಣಗಳು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಓಮಿಕ್ರಾನ್‌ನ ಈ ಎರಡು ರೂಪಾಂತರಗಳು ಒಟ್ಟಿಗೆ ರಚನೆಯಾಗಿರುವುದರಿಂದ, XE ರೋಗಲಕ್ಷಣಗಳು ಸಹ ಓಮಿಕ್ರಾನ್‌ನಂತೆಯೇ ಇರಬಹುದೆಂದು ಹೇಳಲಾಗುತ್ತಿದೆ. ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಆಯಾಸ, ದೇಹದ ನೋವು, ತಲೆನೋವು, ಗಂಟಲು ನೋವು, ಶೀತ ಮತ್ತು ಅತಿಸಾರದಂತಹ ಯಾವುದೇ ರೋಗಲಕ್ಷಣಗಳನ್ನು ನೀವು ಅನುಭವಿಸಿದರೆ, ನೀವು ಒಮ್ಮೆ ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಳ್ಳುವುದು ಉಚಿತ…








