COVID 19 CASE UPDATE : ದೇಶದಲ್ಲಿ 3,37,704 ಮಂದಿಗೆ ಸೋಂಕು, 488 ಜನ ಬಲಿ

1 min read
third wave corona

COVID 19 CASE UPDATE : ದೇಶದಲ್ಲಿ 3,37,704 ಮಂದಿಗೆ ಸೋಂಕು, 488 ಜನ ಬಲಿ Coronavirus Highlights saaksha tv

ನವದೆಹಲಿ : ಭಾರತದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆಯ ಆರ್ಭಟ ಮುಂದುವರೆಯುತ್ತಿದ್ದು, ಕಳೆದ  24 ಗಂಟೆಯಲ್ಲಿ 3,37,704 ಕೊರೊನಾ ಪ್ರಕರಣಗಳು ದಾಖಲಾಗಿವೆ.

488 ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಈ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಗುರುವಾರಕ್ಕೆ ಹೋಲಿಸಿದರೆ, ಕಳೆದ 24 ಗಂಟೆಗಳಲ್ಲಿ ಸುಮಾರು 10 ಸಾವಿರ ಸೋಂಕಿತರು ಕಡಿಮೆ ಪತ್ತೆಯಾಗಿದ್ದಾರೆ.

Coronavirus Highlights saaksha tv

ಇನ್ನು ಕಳೆದ 274 ಗಂಟೆಗಳಲ್ಲಿ 2,42,676 ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ದೇಶದಲ್ಲಿ ಒಟ್ಟು ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ 10,050ಕ್ಕೆ ಏರಿಕೆ ಕಂಡಿದೆ.

ಇತ್ತ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದರೂ, ಈ ಹಿಂದಿನ ಎರಡು ಅಲೆಗಳಿಗೆ ಹೋಲಿಕೆ ಮಾಡಿಕೊಂಡರೇ ಮೂರನೇ ಅಲೆಯ ತೀವ್ರತೆ ಕಡಿಮೆ ಇದೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd