ಹೈದರಾಬಾದ್: ನಕಲಿ ನೋಟು ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ವೆಬ್ ಸೀರಿಸ್ ನಿಂದ ಪ್ರೇರಣೆ ಪಡೆದು ಈ ದಂಧೆಯಲ್ಲಿ ತೊಡಗಿದ್ದರು ಎನ್ನಲಾಗಿದೆ. ವನಂ ಲಕ್ಷ್ಮೀನಾರಾಯಣ ಹಾಗೂ ಆತನ ಸಹಚರ ಎರುಕಳ ಪ್ರಣಯ್ ಕುಮಾರ್ ಬಂಧಿತ ಆರೋಪಿಗಳು.
ಪ್ರಮುಖ ಆರೋಪಿ ವನಂ ಲಕ್ಷ್ಮೀನಾರಾಯಣ, ಕಂಪ್ಯೂಟರ್ ಪರಿಣತಿ ಹೊಂದಿದ್ದು, ಕೃತ್ಯಕ್ಕಾಗಿ ಸ್ಕ್ರೀನ್ ಪ್ರಿಂಟರ್, ಗ್ರೀನ್ ಫಾಯಿಲ್ ಪೇಪರ್, ಜೆಕೆ ಎಕ್ಸೆಲ್ ಬಾಂಡ್ ಪೇಪರ್ಗಳು, ಕಟರ್ಗಳು ಮತ್ತು ಲ್ಯಾಮಿನೇಷನ್ ಯಂತ್ರ ಬಳಸುತ್ತಿದ್ದ ಎನ್ನಲಾಗಿದೆ.
ಹೀಗೆ ಸಿದ್ಧವಾದಿ ನೋಟುಗಳನ್ನು ಪ್ರಣಯ್ ಕುಮಾರ್ ಮಾರುಕಟ್ಟೆ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಲಾವಣೆ ಮಾಡುತ್ತಿದ್ದ. ಹೀಗೆ ಅಂಗಡಿಯೊಂದರಲ್ಲಿ 20 ಸಾವಿರ ರೂ. ನೋಟು ಚಲಾವಣೆ ಮಾಡುವ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾನೆ. ವಿಚಾರಣೆ ವೇಳೆ ಪ್ರಮುಖ ಆರೋಪಿಯ ಹೆಸರು ಬಾಯಿ ಬಿಟ್ಟಿದ್ದು, ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 4 ಲಕ್ಷ ರೂ. ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.