ಉಡುಪಿ: ಗಾಂಜಾ ನಶೆಯಲ್ಲಿದ್ದ ಗುಂಪು ದಂಪತಿ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಉಡುಪಿಯ ಮಲ್ಪೆ ಬೀಚ್ (Malpe Beach) ಹತ್ತಿರ ಈ ಘಟನೆ ನಡೆದಿದೆ. ಬೀಚ್ ಹತ್ತಿರ ಗುಂಪು ಹಾಗೂ ದಂಪತಿ ಮಧ್ಯೆ ಬೈಕ್ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಗಿದೆ. ಈ ವೇಳೆ ದಂಪತಿ ಮೇಲೆ ಗಾಂಜಾ ಸೇವಿಸಿದ್ದ ಯುವಕರ ಗುಂಪು ಹಲ್ಲೆ ನಡೆಸಿದೆ.
ಶೇಖರ್ ತಿಂಗಳಾಯ ಮತ್ತು ಗೀತಾ ಹಲ್ಲೆಗೊಳಗಾಗಿರುವ ದಂಪತಿ. ಸಾಗರ್, ಚರಣ್, ಯಶವಂತ್, ಕಿಶೋರ್, ರಾಜ ಮೇಲೆ ಹಲ್ಲೆ ಮಾಡಿರುವ ವ್ಯಕ್ತಿಗಳು ಎಂದು ತಿಳಿದು ಬಂದಿದೆ. ಸಿಸಿ ಕ್ಯಾಮೆರಾದಲ್ಲಿ ಹಲ್ಲೆಯ ದೃಶ್ಯ ಸೆರೆಯಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ದಂಪತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.








