ನಡು ರಸ್ತೆಯಲ್ಲಿ ಬೈಕ್ ರೈಡ್ ಮಾಡುತ್ತಾ ಲಿಪ್ ಲಾಕ್ – ಪ್ರೇಮಿಗಳ ಹುಚ್ಚಾಟ ವೈರಲ್

1 min read

ನಡು ರಸ್ತೆಯಲ್ಲಿ ಬೈಕ್ ರೈಡ್ ಮಾಡುತ್ತಾ ಲಿಪ್ ಲಾಕ್ – ಪ್ರೇಮಿಗಳ ಹುಚ್ಚಾಟ ವೈರಲ್

ಪ್ರೇಮಕ್ಕೆ ಕಣ್ಣಿಲ್ಲ, ಪ್ರೇಮ ಕುರುಡು ಎನ್ನುತ್ತಾರೆ. ಆದರೇ ಪ್ರೇಮಿಗಳಿಗೆ ಜಗತ್ತಿನ ಪರಿಜ್ಞಾನವೂ ಇರುವುದಿಲ್ಲ ಎಂಬುದು ಈ ಸುದ್ದಿ ನೋಡಿದ್ರೆ ತಿಳಿಯುತ್ತೆ.  ಪ್ರೇಮಿಗಳಿಬ್ಬರು ಹಾಡಹಗಲೇ ರಸ್ತೆಯಲ್ಲಿ ಬೈಕ್ ಮೇಲೆ ಕುಳಿತು ರೋಮ್ಯಾನ್ಸ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಚಾಮರಾಜನಗರದ ಗುಂಡ್ಲುಪೇಟೆ ರಸ್ತೆಯಲ್ಲಿ ಪ್ರೇಮಿಗಳಿಬ್ಬರು ನಡುರಸ್ತೆಯಲ್ಲಿ ಬೈಕ್ ಮೇಲೆ ಕುಳಿತು ಸವಾರಿ ಮಾಡುತ್ತಾ ಸಾರ್ವಜನಿಕವಾಗಿ ಲಿಪ್‍ಲಾಕ್ ಮಾಡಿದ್ದಾರೆ. ಪಲ್ಸರ್ ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವಕನ  ಎದುರು ಕುಳಿತ ಯುವತಿ ತನ್ನ ಪ್ರಿಯಕರನನ್ನು ಬಿಗಿದಪ್ಪಿಕೊಂಡು ಚುಂಬಿಸಿದ್ದಾಳೆ. ಬಸ್ಸು, ಲಾರಿಗಳ ಸಂಚಾರದ ಪರಿವೇ ಇಲ್ಲದೇ ಹೆದ್ದಾರಿಯಲ್ಲಿ ಹುಚ್ಚಾಟ ನಡೆಸಿರುವ ವೀಡಿಯೋದಲ್ಲಿ ವೈರಲ್ ಆಗಿದೆ.

ಪ್ರೇಮಿಗಳ ರೊಮ್ಯಾನ್ಸ್ ನ್ನ ಕೆಲ ಸವಾರರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಹೆಲ್ಮೆಟ್ ಹಾಕದೇ ಬೈಕ್ ರೈಡ್ ಮಾಡಿದ್ದಲ್ಲದೇ, ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ. ಆದರೆ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಡಿವೈಎಸ್‍ಪಿ ಸೂಚನೆ ಮೇರೆಗೆ ಬೈಕ್ ಜಪ್ತಿ ಮಾಡಲು ತಲಾಶ್ ನಡೆಸುತ್ತಿರುವುದಾಗಿ ಚಾಮರಾಜನಗರ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ. ಬೈಕ್ ಚಾಮರಾಜನಗರದಲ್ಲಿ ನೊಂದಾವಣಿಯಾಗಿರುವು ತಿಳಿದು ಬಂದಿದೆ..

couples kiss while riding bike at chamarajanagar

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd