Covid-19 Update : ರಾಜ್ಯದಲ್ಲಿ ಇಂದು 14,473 ಕೊರೊನಾ ಕೇಸ್ ಪತ್ತೆ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಮೂರನೇ ಅಲೆಯ ಆರ್ಭಟ ಮುಂದುವರೆದಿದ್ದು, ರಾಜ್ಯದಲ್ಲಿ ಇಂದು 14,473 ಹೊಸದಾಗಿ ಕೊರೊನಾ ಕೇಸ್ ಪತ್ತೆಯಾಗಿವೆ. ಇದೇ ಅವಧಿಯಲ್ಲಿ ಐದು ಮಂದಿ ಹೆಮ್ಮಾರಿ ಸೋಂಕಿನಿಂದಾಗಿ ಕೊಲೆಯುಸಿರೆಳೆದಿದ್ದಾರೆ.
https://twitter.com/mla_sudhakar/status/1480881868748648452?s=20
ಇಂದಿನ ಪ್ರರಕಣಗಳೊಂದಿಗೆ ರಾಜ್ಯದಲ್ಲಿ ಕೊರೊನಾ ಪಾಸಿಟಿಸಿವಿ ದರ ಶೇಕಡಾ 10.30ಕ್ಕೆ ಏರಿಕೆಯಾಗಿದೆ. ಒಂದು 1356 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಕರ್ನಾಟಕದಲ್ಲಿ ಸದ್ಯ 73,260 ಕೇಸ್ ಗಳು ಸಕ್ರಿಯವಾಗಿವೆ.
ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಕೊರೊನಾ ಕೇಸ್ ಗಳ ಸಂಖ್ಯೆ 10 ಸಾವಿರದ ಗಡಿದಾಟಿದೆ. ಇವತ್ತು ನಗರದಲ್ಲಿ 10,800 ಕೊರೊನಾ ಕೇಸ್ ಪತ್ತೆಯಾಗಿವೆ. ಮೂರು ಮಂದಿ ಕೊನೆಯುಸಿಳೆದಿದ್ದಾರೆ. ನಗರದಲ್ಲಿನ್ನೂ 59 ಸಾವಿರಕ್ಕೂ ಹೆಚ್ಚು ಕೊರೊನಾ ಸಕ್ರಿಯ ಪ್ರಕರಣಗಳಿವೆ.