ಕೊರೊನಾ ಬಗ್ಗೆ ಭಯವಿರುವವರ ಬಗ್ಗೆ ಅಧ್ಯಯಯನ ಏನು ಹೇಳುತ್ತೆ..?
ದೇಶ ಅಷ್ಟೇ ಅಲ್ಲದೇ ಇಡೀ ವಿಶ್ವವನ್ನೇ ಹೆಮ್ಮಾರಿ ಕೊರೊನಾ ಇನ್ನಿಲ್ಲದಂತೆ ಕಾಡ್ತಿದೆ.. ಈ ನಡುವೆ ಬಹುತೇಕರು ಕೊರೊನಾ ಬಗ್ಗೆ ನಿಲರ್ಕ್ಷ್ಯ ವಹಿಸುತ್ತಿದ್ದು, ಮಾಸಕ್ ಇಲ್ಲದೇ , ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಬಿಂದಾಸ್ ಆಗಿ ಓಡಾಡುತ್ತಿದ್ರೆ, ಇನ್ನೂ ಅನೇಕರು ದಿನೇ ದಿನೇ ಪ್ಯಾನಿಕ್ ಆಗ್ತಿದ್ದು, ಭಯದಿಂದಲೇ ಬದುಕು ನಡೆಸ್ತಿದ್ದಾರೆ.. ಅತಿಯಾದ ಕಾಳಜಿ ಮಾಡಿಕೊಳ್ತಿದ್ದಾರೆ.. ಅಲ್ಲದೇ ಇನ್ನೂ ಅನೇಕರು ಹೆದರಿಕೆಯಿಂದಲೇ ಆತ್ಮಹತ್ಯೆಗೂ ಶರಣಾಗಿರುವ ಘಟನೆಗಳ ನಡೆದುಹೋಗಿದೆ..
ಈ ನಡುವೆ ಕೊರೊನಾ ಸೋಂಕು ಬರಬಹುದು ಎಂಬ ಭಯವುಳ್ಳವರು ಸೋಂಕಿನ ಬಗ್ಗೆ ನಿರ್ಲಕ್ಷ್ಯ ತೋರುವವರ ತಪ್ಪುಗಳನ್ನ ಹೆಚ್ಚಾಗಿ ಗುರುತಿಸುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ. ನಮ್ಮ ಭಾವನೆಗಳು ಹಾಗೂ ಅಂತಃ ಪ್ರಜ್ಞೆಗಳಿಗೆ ಪರಸ್ಪರ ಸಂಬಂಧವಿದೆ. ಇದರಲ್ಲಿ ಆರೋಗ್ಯದ ಬಗೆಗಿನ ಕಾಳಜಿ ಹಾಗೂ ಸುರಕ್ಷತೆ ಕೂಡ ಸೇರಿದೆ. ಹೀಗಾಗಿ ತಪ್ಪು ಮಾಡುವವರನ್ನ ಖಂಡಿಸುವ ನಮ್ಮ ಬುದ್ಧಿಯು ಸಂಪೂರ್ಣ ತರ್ಕಬದ್ಧವೇ ಆಗಿರಬೇಕು ಎಂದೇನಿಲ್ಲ. ಇದು ನಮ್ಮ ಭಾವನೆ ಕೂಡ ಆಗಿರಬಹುದು ಎಂದು ಬ್ರಿಟನ್ನ ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯದ ಅಧ್ಯಯನವು ಹೇಳಿದೆ.
ಜರ್ನಲ್ ಎವಲ್ಯೂಷನರಿ ಸೈಕಾಲಜಿಯಲ್ಲಿ ಈ ಅಧ್ಯಯನದ ವರದಿಯು ಪ್ರಕಟವಾಗಿದೆ. ಕಳೆದ ವರ್ಷದ ಮಾರ್ಚ್ ಹಾಗೂ ಮೇ ತಿಂಗಳಿನಲ್ಲಿ ಅಮೆರಿಕದ 900 ಮಂದಿಯ ಮೇಲೆ ಈ ಅಧ್ಯಯನವನ್ನ ನಡೆಸಲಾಗಿತ್ತು. ಈ ಅಧ್ಯಯನದ ಪ್ರಕಾರ ಕೋವಿಡ್ 19 ಅಪಾಯಗಳ ಬಗ್ಗೆ ಹೆಚ್ಚು ಭಯ ಹೊಂದಿರುವವರು ಸಾರ್ವಜನಿಕವಾಗಿ ನಿರ್ಲಕ್ಷ್ಯ ತೋರುವವರನ್ನ ಹೆಚ್ಚಾಗಿ ಖಂಡಿಸುತ್ತಾರೆ. ಅವರ ನಿರ್ಲಕ್ಷ್ಯದಿಂದಾಗಿ ತಮಗೆ ಹಾನಿ ಆಗಬಹುದು ಎಂಬ ಭಯ ಇಂತವರಲ್ಲಿ ಹೆಚ್ಚಾಗಿ ಕಾಡುತ್ತೆ ಎಂದು ಈ ಅಧ್ಯಯನ ಹೇಳಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.