Covid-19 Update – ಕಳೆದ 24 ಗಂಟೆಗಳಲ್ಲಿ 28 ಮಂದಿ ಕೋವಿಡ್ ನಿಂದ ಮೃತ
ದೇಶದಲ್ಲಿ ಕೊರೊನಾ ಪ್ರಕರಣಗಳಲ್ಲಿ ಏರಿಳಿತದ ಪ್ರಕ್ರಿಯೆ ಮುಂದುವರೆದಿದೆ. ಮಂಗಳವಾರಕ್ಕೆ ಹೋಲಿಸಿದರೆ ಬುಧವಾರ, ಹೊಸ ಸೋಂಕಿತರ ಪ್ರಮಾಣ ಹೆಚ್ಚಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಬೆಳಗ್ಗೆ 8 ಗಂಟೆಗೆ ನವೀಕರಿಸಿದ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ 16,159 ಹೊಸ ಸೋಂಕುಗಳು ಕಂಡುಬಂದರೆ, 28 ಜನರು ಸಾವನ್ನಪ್ಪಿದ್ದಾರೆ. ದೈನಂದಿನ ಸೋಂಕಿನ ಪ್ರಮಾಣವು ಶೇಕಡಾ 3.56 ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,15,212ಕ್ಕೆ ಏರಿಕೆಯಾಗಿದೆ.
ಮಂಗಳವಾರ, ದೇಶದಲ್ಲಿ 13,085 ಹೊಸ ಸೋಂಕಿತರು ಕಂಡುಬಂದರೆ, ಸೋಮವಾರ 16,135, ಭಾನುವಾರ 16,103 ಮತ್ತು ಶನಿವಾರ 17,092 ಮತ್ತು ಶುಕ್ರವಾರ 17,070 ಪತ್ತೆಯಾಗಿದೆ. ಇದರಿಂದ ದಿನದಿಂದ ದಿನಕ್ಕೆ ಹೊಸ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದು ಸ್ಪಷ್ಟವಾಗಿದೆ.
Covid-19 Update – Increase In Covid Case And Daily Positivity Rate, 28 People Died Due To Pandemic