ದೆಹಲಿಯಲ್ಲಿ ಕೋವಿಡ್ ಹೆಚ್ಚಳ – ಒಂದೇ ದಿನ 5481 ಪ್ರಕರಣ ಪತ್ತೆ…
ದೆಹಲಿಯಲ್ಲಿ ಮಂಗಳವಾರ ಒಂದೇ ದಿನ 5481 ಹೊಸ ಕೋವಿಡ್ – 19 ಪ್ರಕರಣಗಳು ವರದಿಯಾಗಿವೆ. ಮೂವರು ಸಾವನ್ನಪ್ಪಿದ್ದಾರೆ. ರಾಜಧಾನಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 14,889 ಕ್ಕೆ ತಲುಪಿದೆ. ಇದರೊಂದಿಗೆ ಪಾಸಿಟಿವಿಟಿ ದರವೂ ಶೇ.8.7ಕ್ಕೆ ಏರಿಕೆಯಾಗಿದೆ.
7 ತಿಂಗಳ ನಂತರ ರಾಜಸ್ಥಾನದಲ್ಲಿ 1000 ಕ್ಕೂ ಹೆಚ್ಚು ಪ್ರಕರಣಗಳು,
ರಾಜಸ್ಥಾನದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 1137 ಪ್ರಕರಣಗಳು ವರದಿಯಾಗಿವೆ. ರಾಜಧಾನಿ ಜೈಪುರದಲ್ಲಿ ಒಟ್ಟು 745 ಹೊಸ ರೋಗಿಗಳು ಪತ್ತೆಯಾಗಿದ್ದಾರೆ. ಜೈಪುರದಲ್ಲಿ ಸಾವಿನ ಪ್ರಕರಣವೂ ಬೆಳಕಿಗೆ ಬಂದಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಎರಡು ದಿನಗಳಲ್ಲಿ, ರಾಜ್ಯದ ಅತಿದೊಡ್ಡ ಕೋವಿಡ್ ಕೇರ್ ಆಸ್ಪತ್ರೆಯಾದ ರಾಜಸ್ಥಾನ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯಕ್ಕೆ (RUHS) ದಾಖಲಾದ ರೋಗಿಗಳ ಸಂಖ್ಯೆ ದ್ವಿಗುಣಗೊಂಡಿದೆ.








