ಮೃತ ವ್ಯಕ್ತಿಗೆ ಕೊರೊನಾ ಲಸಿಕೆ ಸರ್ಟಿಫಿಕೆಟ್ ! Saaksha Tv
ತುಮಕೂರು: ಮರಣ ಹೊಂದಿದ ವ್ಯಕ್ತಿ ಎರಡನೇ ಡೋಸ್ ಕೊರೊನಾ ಲಸಿಕೆ ಪಡೆದಿದ್ದರು, ಎಂದು ಸರ್ಟಿಫಿಕೆಟ್ ನೀಡಿರುವ ಘಟನೆ ತುಮಕೂರು ನಲ್ಲಿ ನಡೆದಿದೆ.
ನಗರದ ಮೆಳೆಕೋಟೆ ನಿವಾಸಿ 80 ವರ್ಷದ ಬಸಪ್ಪ 2021ರ ಏಪ್ರಿಲ್ 9ರಂದು ಮೊದಲ ಡೋಸ್ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದರು. ಈ ನಡುವೆ ಜುಲೈ 16 ರಂದು ಅವರು ಮೃತಪಟ್ಟಿದ್ದಾರೆ. ಆದರೆ ನಿನ್ನೆ ಅವರು ಎರಡನೇ ಡೋಸ್ ತೆಗೆದುಕೊಂಡಿರುವ ಬಗ್ಗೆ ಮೆಸೆಜ್ ಬಂದಿದೆ. ಸಂಬಂಧಿಕರು ಸೈಟ್ ಓಪನ್ ಮಾಡಿದಾಗ ಸರ್ಟಿಫಿಕೆಟ್ ಅಪ್‍ಡೇಟ್ ಆಗಿತ್ತು ಎಂದು ಸಂಭಂದಿಕರು ಹೇಳಿದ್ದಾರೆ.
ವ್ಯಕ್ತಿ ಮರಣ ಹೊಂದಿ 6 ತಿಂಗಳಾದರೂ ಸತ್ತ ವ್ಯಕ್ತಿಗೆ ಹೇಗೆ ಲಸಿಕೆ ಕೊಟ್ಟರು ಎಂದು ಮೃತ ಬಸವಪ್ಪನ ಕುಟುಂಬ ಆಶ್ಚರ್ಯ ವ್ಯಕ್ತಪಡಿಸಿದೆ. ಜೊತೆಗೆ ಆರೋಗ್ಯ ಇಲಾಖೆಯ ಈ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕಿದ್ದಾರೆ.
ಹಿಂದೆ ಈ ರೀತಿಯಾದ ಅನೇಕ ಘಟನೆಗಳು ನಡೆದಿರುವ ನಿದರ್ಶನಗಳಿವೆ. ಆದರೂ ಕೂಡ ಸರಕಾರ ಹಾಗೂ ಆರೋಗ್ಯ ಇಲಾಖೆ ಈ ಬಗ್ಗೆ ಗಮನ ಹರಿಸದೇ ಇರುವುದು ವಿಪರ್ಯಾಸದ ಸಂಗತಿ. ಈಗಲಾದರು ಸರಕಾರ ಎಚ್ಚತ್ತು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.