ಲಸಿಕೆ ಪಡೆದ ಬಳಿಕವೂ ಕೆಲವರಿಗೆ ಕೊರೊನಾ ಸೋಂಕು…! ಅಧ್ಯಯನ ಏನು ಹೇಳುತ್ತೆ..?
ಕೊರೊನಾ 2ನೇ ಅಲೆ ದೇಶದ ಜನತೆಯನ್ನು ಇನ್ನಿಲ್ಲದಂತೆ ಕಾಡಿದೆ. ಈ ಅಲೆಯಲ್ಲಿ ಅಪಾರ ಪ್ರಮಾಣದ ಸಾವು-ನೋವು ಸಂಭವಿಸಿದ್ದು, ಇದರ ಜೊತೆಗೆ ಬ್ಲಾಕ್, ವೈಟ್ ಫಂಗಸ್ , ಯೆಲ್ಲೂ, ಹಸರು ಫಂಗಸ್ , ಡೆಲ್ಟಾ , ಲ್ಯಾಂಬ್ಡಾ , ಜಿಕಾ , ಕಪ್ಪಾ ವೈರಸ್ ಗಳ ಆಕಂತ ಜನರನ್ನ ಆತಂಕಕ್ಕೆ ಈಡು ಮಾಡಿದೆ.. ಈ ನಡುವೆ ಕೋವಿಡ್ 3ನೇ ಅಲೆ ಎಚ್ಚರಿಕೆ ನೀಡಲಾಗಿದ್ದು, ಇದರ ಪರಿನಾಮವೂ ಅಷ್ಟೇ ಭೀಕರವಾಗಿರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಈ ನಡುವೆ ಕೊರೊನಾ ವಿರುದ್ಧ ಹೋರಾಟದಲ್ಲಿ ಲಸಿಕೆ ರಾಮಬಾಣದಂತೆ ಕೆಲಸ ಮಾಡಲಿದೆ ಎನ್ನಲಾಗಿದೆ.. ಆದ್ರೆ ಕೋವಿಡ್ ಲಸಿಕೆಯ ಕನಿಷ್ಠ ಒಂದು ಡೋಸ್ ಪಡೆದ ಮಂದಿಯಲ್ಲಿ ಸೋಂಕು ಮತ್ತೊಮ್ಮೆ ಕಂಡುಬಂದಿದ್ದಲ್ಲಿ ಅದು ಡೆಲ್ಟಾ ವೇರಿಯೆಂಟ್ ವೈರಾಣು ಎಂದು ಭಾರತೀಯ ಮದ್ದು ಸಂಶೋಧನಾ ಪ್ರಾಧಿಕಾರ (ಐಸಿಎಂಆರ್) ತಿಳಿಸಿದೆ.
ಬಾಲಕಿಯ ರಕ್ಷಿಸುವುದನ್ನು ನೋಡಲು ಹೋಗಿ ಅದೇ ಬಾವಿಗೆ ಬಿದ್ದ 30 ಮಂದಿ..!
ಹೌದು.. ಕೋವಿಡ್ ಲಸಿಕೆ ಪಡೆದ ಬಳಿಕವೂ ಸೋಂಕು ತಗುಲುವ ವಿಚಾರವಾಗಿ ಅಧ್ಯಯನ ಮಾಡುತ್ತಿರುವ ಐಸಿಎಂಆರ್, ಈ ಸಂಬಂಧ ಲಸಿಕೆ ಪಡೆದ 677 ಮಂದಿಯನ್ನು ಪರೀಕ್ಷೆ ಮಾಡಿದೆ. ಕೋವಿಡ್ ಲಸಿಕೆ ಪಡೆದವರ ಪೈಕಿ ಮತ್ತೊಮ್ಮೆ ಸೋಂಕು ತಗುಲಿದವರಿಗೆ ಸಾವಿನ ಸಾಧ್ಯತೆ ಬಹಳ ಕಡಿಮೆ ಎಂದು ಐಸಿಎಂಆರ್ ತಿಳಿಸಿದೆ.
ಪರೀಕ್ಷೆಗೆ ಒಳಪಟ್ಟ 677 ಮಂದಿಯಲ್ಲಿ 71 ಮಂದಿ ಕೋವ್ಯಾಕ್ಸಿನ್ ಪಡೆದಿದ್ದರೆ ಮಿಕ್ಕವರು ಕೋವಿಶೀಲ್ಡ್ ಪಡೆದಿದ್ದಾರೆ. ಇದೇ ವೇಳೆ ಲಸಿಕೆ ಪಡೆದವರಲ್ಲೂ ಮೂವರು ಮೃತಪಟ್ಟಿದ್ದಾರೆ. 17 ರಾಜ್ಯಗಳಿಂದ ಈ ಮಂದಿಯನ್ನು ಆರಿಸಲಾಗಿದ್ದು, ಅವರೆಲ್ಲರ ಆರ್‌ಟಿ-ಪಿಸಿಆರ್ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಲಾಗಿದೆ. ಸೋಂಕಿಗೆ ತುತ್ತಾಗುವ ಮುನ್ನ ಲಸಿಕೆ ಪಡೆದ ಮಂದಿಯ ಜೀನಾಮಿಕ್ ವಿಶ್ಲೇಷಣೆ ನಡೆಸಿದ ಐಸಿಎಂಆರ್, ಇವರ ಪೈಕಿ 86.1% ಮಂದಿಗೆ ಸೋಂಕು ತಗುಲಿರುವುದು ಡೆಲ್ಟಾ ಅವತರಣಿಕೆಯ ವೈರಸ್‌ನಿಂದ (B.1.617.2) ಎಂದು ತಿಳಿಸಿದೆ.
ಕೋವಿಡ್-19 ಪ್ರಕರಣಗಳ ಪೈಕಿ 9.8% ಮಂದಿಗೆ ಆಸ್ಪತ್ರೆಗೆ ದಾಖಲಾಗಬೇಕಾಗಿ ಬಂದಿದ್ದು, 0.4% ಪ್ರಕರಣಗಳಲ್ಲಿ ಮಾತ್ರವೇ ಈ ಸೋಂಕು ಮಾರಣಾಂತಿಕವಾಗಿವೆ ಎಂದು ಅಧ್ಯಯನ ತಿಳಿಸುತ್ತದೆ. ಲಸಿಕೆ ಪಡೆಯುವುದರಿಂದ ಅಸ್ಪತ್ರೆ ಸೇರಬೇಕಾದ ಅಗತ್ಯ ತಗ್ಗಿ, ಮಾರಣಾಂತಿಕ ಸಾಧ್ಯತೆಗಳು ತಗ್ಗುತ್ತವೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
World Snake Day: ಇವುಗಳ ವಿಷಕ್ಕೆ ಪವರ್ ಹೆಚ್ಚು.. Most Dangerous ಹಾವುಗಳ ಡಿಟೈಲ್ಸ್
ಚೀನಾದಿಂದ ಇಡೀ ವಿಶ್ವಕ್ಕೆ ಹರಡಿರುವ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ 2 ವರ್ಷಗಳಿಂದ ಜಗತ್ತಿನ ಜನರು ಕಷ್ಟ ಪಡ್ತಿದ್ದಾರೆ.. ಲಾಕ್ ಡೌನ್ , ಕ್ವಾರಂಟೈನ್ ನಿಂದಾಗಿ ಜನರು ಮಾನಸಿಕ ಖಿನ್ನತೆಗೂ ಒಳಗಾಗ್ತಿದ್ದಾರೆ.. ಮತ್ತೊಂದೆಡೆ ಕೆಲಸಗಳಿಲ್ಲದೆ ಅದೆಷ್ಟೋ ಕುಟುಂಬಗಳು ಪರದಾಡಿವೆ.. ಇನ್ನೂ ಕಡುಬಡವರು ಒಂದು ಹೊತ್ತಿನ ಊಟಕ್ಕೂ ಪರಿತಪಿಸಿದ್ದಾರೆ… ಕೂಲಿ ಕಾರ್ಮಿಕರು ಕಷ್ಟ ಪಟ್ಟಿದ್ದಾರೆ.. ಇದೇ ಪರಿಸ್ಥಿತಿ ಬಾರತದಲ್ಲೂ ಇದೆ.. ಅದ್ರಲ್ಲೂ ಇಡೀ ವಿಶ್ವಾದ್ಯಂತ ಕೊರೊನಾ 2ನೇ ಹಾವಳಿ ಸಾಕಷ್ಟು ಅವಾಂತರ ಸೃಷ್ಟಿಸಿದೆ… ಕೋಟ್ಯಾಂತರ ಜನರ ಬದುಕು ಮೂರಾಬಟ್ಟೆಯಾಗಿದೆ… ಸಾವಿರಾರು ಮಕ್ಕಳು ತಂದೆ ಅಥವ ತಾಯ ಇಲ್ಲಾ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರು ಜೀವನ ಕಳೆದುಕೊಂಡಿದ್ದಾರೆ.. ಆಪ್ತರನ್ನ , ಸ್ನೇಹಿತರು , ಕುಟುಂಬದವರನ್ನ ಕಳೆದುಕೊಂಡು ಜನರು ಕೊರೊನಾ ಮಹಾಮಾರಿ ಹಾಗೂ ಅದರ ಜನ್ಮಸ್ಥಳ ಚೈನಾಗೆ ಹಿಡಿ ಶಾಪ ಹಾಕ್ತಿದ್ದಾರೆ..