1 ಲಕ್ಷದತ್ತ ದಾಪುಗಾಲಿಟ್ಟ ದೈನಂದಿನ ಕೊರೊನಾ ಕೇಸಸ್ , ಅಮೆರಿಕಾವನ್ನು ಹಿಂದಿಟ್ಟ ಭಾರತ..!
ನವದೆಹಲಿ: ದೇಶಾದ್ಯಂತ ಕೊರೊನಾ 2ನೇ ಅಲೆಯ ಅಬ್ಬರ ದಿನದಿಂದ ದಿನಕ್ಕೆ ಏರಿಕೆಯಾಗ್ತಲೇ ಇದೆ. ದೇಶದಲ್ಲಿ ಒಂದೇ ದಿನ ಒಟ್ಟು 93,249 ಕೋವಿಡ್ ಪಾಸಿಟಿವ್ ಕೇಸಸ್ ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,24,85,509ಕ್ಕೆ ಏರಿಕೆಯಾಗಿದೆ.
ಅಲ್ಲದೇ ಈ ಮೂಲಕ ಭಾರತ ಅಮೆರಿಕಾವನ್ನ ಸ್ಟಾಟಿಸ್ಟಿಕ್ಸ್ ನಲ್ಲಿ ಹಿಂದಿಟ್ಟು 2ನೇ ಸ್ಥಾನಕ್ಕೇರಿದೆ. ಕಳೆದ 24 ಗಂಟೆಯಲ್ಲಿ ಮಹಾಮಾರಿಗೆ ಒಟ್ಟು 513 ಮಂದಿ ಬಲಿಯಾಗಿದ್ದಾರೆ. ಹೀಗೆ ಸಾವಿನ ಸಂಖ್ಯೆ , ಹಾಗೂ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗ್ತಲೇ ಇದ್ದು, ಆತಂಕಕ್ಕೆ ಕಾರಣವಾಗಿದೆ. ದೇಶದಲ್ಲಿ ಈವರೆಗೂ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 1,64,623 ಕ್ಕೆ ಏರಿಕೆಯಾಗಿದೆ.
ಇನ್ನು ದೇಶದಲ್ಲಿ 6,91,597 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು 1,16,29,289 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 60,048 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಬಾಲಿವುಡ್ ನ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಗೂ ಕೊರೊನಾ ಪಾಸಿಟಿವ್..!
ಲೈಂಗಿಕ ಕಿರುಕುಳ : ವಿಧಾನಸಭಾ ಚುನಾವಣೆಯಿಂದ ಹೊರನಡೆದ ಕೇರಳದ ಮೊದಲ “ಮಂಗಳಮುಖಿ” ಅಭ್ಯರ್ಥಿ
ಪಾಷಾಣವಾಯ್ತು ಕಲ್ಲಂಗಡಿ | ಹೈದರಾಬಾದ್ ನಲ್ಲಿ ಇಬ್ಬರು ಸಾವು
ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರ ಹೆಸರುಗಳು ಸಾರಿಗೆ ಇಲಾಖೆ ವೆಬ್ ಸೈಟ್ ಗಳಲ್ಲಿ ಪ್ರಕಟ..!