ಕೊರೊನಾ ರಿಪೋರ್ಟ್ : ಕಳೆದ 24 ಗಂಟೇಲಿ 16,326 ಕೇಸ್ ಪತ್ತೆ, 666 ಸಾವು
ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕಿನ ಏರಿಳಿತ ಮುಂದುವರೆದಿದೆ.
ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 16,326 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಅಲ್ಲದೆ 666 ಮಂದಿ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ.
ಇದರೊಂದಿಗೆ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 3,41,59,562 ಕ್ಕೆ ತಲುಪಿದೆ.
ಸೋಂಕಿನಿಂದ ಮೃತರಾದವರ ಸಂಖ್ಯೆ 453708 ಕ್ಕೆ ತಲುಪಿದೆ.
ಇನ್ನು ದೇಶದಲ್ಲಿ ಇನ್ನೂ ಸಕ್ರಿಯ ಪ್ರಕರಣಗಳ ಸಂಖ್ಯೆ 1,73,728 ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 17,677 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 3,35,32,126ಕ್ಕೆ ತಲುಪಿದೆ.