ಒಂದೇ ದಿನ ಮಗು ಸೇರಿ 15ಕ್ಕೂ ಹೆಚ್ಚು ಜನರಿಗೆ ಕಚ್ಚಿದ ನಾಯಿ – ನಾಯಿ ಕೊಂದ ಜನ
ಹಾಸನ : ಹಾಸನದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಒಂದೇ ದಿನ ಒಂದು ಮಗು ಸೇರಿ 15 ಜನರಿಗೆ ನಾಯಿ ಕಚ್ಚಿದ ಘಟನೆ ಹಾಸನ ನಗರದ ಐದನೇ ವಾರ್ಡ್ ಕುವೆಂಪು ನಗರದಲ್ಲಿ ನಡೆದಿದೆ. ಈ ನಾಯಿ ರಸ್ತೆಯಲ್ಲಿ ಅಟ್ಟಾಡಿಸಿ ಸಿಕ್ಕ ಸಿಕ್ಕವರಿಗೆ ಕಚ್ಚಿದೆ. ಹೀಗಾಗಿ ರೊಚ್ಚಿಗೆದ್ದ ಜನರು ಬೀದಿ ನಾಯಿಯನ್ನ ಕೊಂದುಹಾಕಿದ್ದಾರೆ.
ಇನ್ನೂ ನಗರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬೀದಿ ನಾಯಿಗಳು ಹೆಚ್ಚಾಗಿದ್ದು, ನಾಯಿ ಹಾವಳಿಯಿಂದ ಜನರಿಗೆ ಸಂಕಷ್ಟ ಎದುರಾಗಿದೆ. ಮಗುವಿಗೆ ನಾಯಿ ಕಚ್ಚಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ ಎನ್ನಲಾಗಿದೆ. ಗಾಯಾಳುಗಳಿಗೆ ಹಾಸನದ ವೈದ್ಯಕೀಯ ಬೋದಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.