ಭೀಮಾತೀರದಲ್ಲಿ ಮರ್ಯಾದೆ ಹತ್ಯೆ : ಪ್ರೇಯಸಿ ಎದುರೇ ಪ್ರಿಯಕರನ ಕೊಲೆ vijayapur Saaksha tv
ವಿಜಯಪುರ : ಭೀಮಾತೀರದಲ್ಲಿ ಮರ್ಯಾದೆ ಹತ್ಯೆ ನಡೆದಿದ್ದು, ಪ್ರಿಯತಮೆಯ ಕಣ್ಣೆದುರೇ ಪ್ರಿಯಕರನನ್ನು ಕೊಲೆ ಮಾಡಲಾಗಿದೆ.
ವಿಕಯಪುರ ಜಿಲ್ಲೆಯ ಬಳಗಾನೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ. 32 ವರ್ಷದ ರವಿ ನಿಂಬರಗಿ ಮೃತ ವ್ಯಕ್ತಿಯಾಗಿದ್ದಾನೆ.
ರವಿ ಕಳೆದ ಮೂರ್ನಾಲ್ಕು ವರ್ಷದಿಂದ ಅನ್ಯಕೋಮಿನ ಯುವತಿ ಅಮೀನಾ ಬೇಗಂನ್ನು ಪ್ರೀತಿಸುತ್ತಿದ್ದ.
ಈ ವಿಚಾರ ತಿಳಿದ ಹುಡುಗಿ ಮನೆಯವರು ರವಿಯ ಕೊಲೆಗೆ ಪ್ಲಾನ್ ಮಾಡಿದ್ದರು.
ಅದರಂತೆ ಸಂತೆ ಮುಗಿಸಿಕೊಂಡು ಬರುತ್ತಿದ್ದ ರವಿಯನ್ನು ಅಡ್ಡಗಟ್ಟಿದ ಎಂಟು ಮಂದಿ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಅಲ್ಲದೆ ಶವವನ್ನು ಬಿಡದೇ ತೆಗೆದುಕೊಂಡು ಹೋಗಿದ್ದಾರೆ.
ಇದೀಗ ಈ ಸಂಬಂಧ ಆಲಮೇಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.