ಭಾರತ ಮತ್ತು ಆಕ್ಸಿಜನ್ ಕೊರತೆ – ಹೇಗಿದೆ ಪ್ರಸ್ತುತ ಪರಿಸ್ಥಿತಿ
ಭಾರತದಲ್ಲಿ ಕೊರೊನಾ 2ನೇ ಅಲೆ ಹಿಂದೆಂದಿಗಿಂತಲೂ ಅತಿ ಭಯಾನಕವಾಗಿ ಅಪ್ಪಳಿಸಿದೆ. ನಿತ್ಯ ಸಾವಿರಾರು ಮಂದಿ ಸಾಯುತ್ತಿದ್ದಾರೆ. 4 ಲಕ್ಷಕ್ಕೂ ಅಧಿಕ ಸೋಂಕಿತರ ಸಂಖ್ಯೆಪತ್ತೆಯಾಗ್ತಿದೆ.. ಸುಮಾರು 40 ರಿಂದ 50 ಸಾವಿರ ಕೇಸಸ್ ಕರ್ನಾಟಕದಿಂದಲೇ ಪತ್ತೆಯಾಗ್ತಿರುವ ಆಘಾತಕಾರಿ ಸಂಗತಿಯಾಗಿದೆ. ಇದನ್ನ ಹೊರತುಪಡಿಸಿ ಮಹಾರಾಷ್ಟ್ರ , ಕೇರಳ , ತೆಲಂಗಾಣ ಸೇರಿ 13 ರಾಜ್ಯಗಳಲ್ಲಿ ಹೆಮ್ಮಾರಿ ಕೊರೊನಾ ರಣಕೇಕೆ ಹಾಕುತ್ತಿದೆ.. ಇಷ್ಟು ದಿನಗಳ ವರೆಗೂ ಸರ್ಕಾರ ಲಾಕ್ ಡೌನ್ ಮಾಡಲು ಮೀನಾಮೇಷ ಎಣಿಸಿದ್ದು, ಸೋಂಕು ಹೆಚ್ಚಾಗಲು ಪ್ರಮುಖ ಕಾರಣ ಅಂತಲೂ ಕೆಲವು ಲೆಕ್ಕಾಚರಗಳನ್ನ ಹಾಕಲಾಗ್ತಿದೆ.
ಈ ನಡುವೆ ಹೆಚ್ಚಿನ ಸೋಂಕಿತರು ಮೃತಪಡುತ್ತಿರುವುದಕ್ಕೆ ಕಾರಣ ಆಕ್ಸಿಜನ್ ಕೊರತೆ. ಚಾಮರಾಜಗರದಲ್ಲಿ ಇತ್ತೀಚೆಗೆ ಆಕ್ಸಿಜನ್ ಕೊರತೆಯಿಂದಾಗಿ ಸುಮಾರು 24 ಜನರು ಮೃತಪಟ್ಟಿದ್ದರು. ಹೀಗೆಯೇ ಮಹಾರಾಷ್ಟ್ರದಲ್ಲಿ, ಹರಿದ್ವಾರದಲ್ಲಿ ಮೀರತ್ ನಲ್ಲಿ ಅನೇಕ ಕಡೆ ಚಿಕಿತ್ಸೆ ವೇಳೆ ಆಕ್ಸಿಜನ್ ಕೊರತೆ ಇಂದ ಅನೇಕ ಜೀವಗಳು ಹೋಗಿವೆ..
ಮತ್ತೊಂದೆಡೆ ಚಿಕಿತ್ಸೆ ಸರಿಯಾಗಿ ಸಿಗದೇ , ಬೆಡ್ ಸಿಗದೇ ಆಕ್ಸಿಜನ್ ಸಿಗದೇ ಸೋಂಕಿತರು ನರಳಿ ನರಳಿ ಪ್ರಾಣ ಬಿಡುತ್ತಿದ್ಧಾರೆ. ಆದ್ರೆ ಸರ್ಕಾರ ಯಾಕೆ ಆಕ್ಸಿಜನ್ ಕೊರತೆ ನೀಗಿಸಲು ಯಾವುದೇ ಕ್ರಮಗಳನ್ನ ಕೈಗೊಳ್ಳುತ್ತಿಲ್ಲ ಎನ್ನುವುದು ಸದ್ಯಕ್ಕೆ ಎದ್ದಿರುವ ಬಹುಮುಖ್ಯವಾದ ಪ್ರಶ್ನೆಯಾಗಿದೆ..
ಆಕ್ಸಿಜನ್ ಕೊರತೆ
ಸದ್ಯದ ಪರಿಸ್ಥಿತಿಯಲ್ಲಿ ಸೋಂಕಿತರಿಗೆ ಚಿಕಿತ್ಸೆ ವೇಳೆ ಬಾಧಿಸುತ್ತಿರುವ ಅತಿ ದೊಡ್ಡ ತೊಡಕು ಅಥವ ಸಮಸ್ಯೆ ಎಂದ್ರೆ ಅದು ಆಕ್ಸಿಜನ್ ಕೊರತೆ.. ಅದ್ರಲ್ಲೂ ಮೊದಲನೆ ಅಲೆ ವೇಳೆ ಆಕ್ಸಿಜನ್ ಕೊರತೆ ಅಷ್ಟರ ಮಟ್ಟಿಗೆ ಆಗಿರಲಿಲ್ಲ. ಆದ್ರೆ 2ನೇ ಅಲೆ ಸಂದರ್ಭದಲ್ಲಿ ಹೆಚ್ಚಿನ ಸೋಂಕಿತರಲ್ಲಿ ಉಸಿರಾಟದ ತೊಂದರೆ ಕಂಡುಬರುತ್ತಿದೆ. ಆಕ್ಸಿಜನ್ ನ ಅನಿವಾರ್ಯತೆ ಹೆಚ್ಚಾಗಿದೆ..
ಹಾಗಾದ್ರೆ ಬಾರತದಲ್ಲಿ ಆಕ್ಸಿಜನ್ ಇಲ್ವಾ…? ಸರ್ಕಾರ ಯಾಕೆ ಯಾವುದೇ ಕ್ರಮಗಳನ್ನ ಕೈಗೊಂಡಿಲ್ಲ…? ಭಾರತದಲ್ಲಿ ಕೋವಿಡ್ 2ನೇ ಅಲೆ ಅಪ್ಪಳಿಸಲಿದೆ.. ಈ ಬಾರಿ ಇದರ ಪರಿಣಾಮವು ಅತ್ಯಂತ ಭೀಕರವಾಗಿರಲಿದೆ ಎಂದು ಈ ಹಿಂದೆಯೇ ಅನೇಕ ತಜ್ಞರು, ಅನೇಕ ವರದಿಗಳಲ್ಲಿ ಹೇಳಲಾಗಿತ್ತು. ಇದರ ಪರಿಣಾಮಗಳು ಅಷ್ಟೇ ಭಯಾನಕವಾಗಿರಲಿದೆ ಎಂದು ಸರ್ಕಾರಕ್ಕೆ ಅನೇಕ ವೈದ್ಯಕೀಯ ಸಲಹೆಗಾರರು ಈ ಹಿಂದೆಯೇ ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಆದ್ರೂ ಸಹ ಸರ್ಕಾರ ಯಾಕೆ ಈ ಬಗ್ಗೆ ಕ್ರಮ ಹಾಗೂ ಮುನ್ನೆಚ್ಚರಿಕೆಗಳನ್ನ ವಹಿಸಿಲ್ಲ. ಎಲ್ಲೆಡೆ ಹೆಚ್ಚುವರಿ ಆಕ್ಸಿಜನ್ ಉತ್ಪಾದಕ ಘಟಕಕಗಳನ್ನ ಸ್ಥಾಪನೆ ಮಾಡುವುದಾಗಲಿ ಅಥವಾ ಕೋವಿಡ್ ಕೇರ್ ಸೆಂಟರ್ ಗಳನ್ನ ತೆರೆಯುವ ಕೆಲಸವನ್ನ ಸಕ್ಷಮವಾಗಿ ಮಾಡುವಲ್ಲಿ ನಿಜಕ್ಕೂ ಸರ್ಕಾರ ಎಡವಿದ್ಯಾ ಅನ್ನೋದು ಪ್ರಶ್ನೆ…?
ಕರ್ನಾಟಕ , ಗುಜರಾತ್ , ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ , ತೆಲಂಗಾಣ ಸೇರಿ ಸುಮಾರು 13 ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದೆ.. ಈ ರಾಜ್ಯಗಳ ಪೈಕಿ ಮಹಾರಾಷ್ಟ್ರ ಹಾಗೂ ಗುರಾತ್ ನಲ್ಲಿ ಅತಿ ಹೆಚ್ಚು ಆಕ್ಸಿಜನ್ ಉತ್ಪಾದನೆ ಆಗುತ್ತಿದೆ.
ಭಾರತದಲ್ಲಿ 70 % ಗಿಂತಲೂ ಅಧಿಕ ಆಕ್ಸಿಜನ್ ಉತ್ಪಾನೆ ಮಾಡುವ ಕಂಪನಿ INOX.. ಹೀಗೆ ಇನ್ನೂ ಕೆಲ ದೊಡ್ಡ ದೊಡ್ಡ ಕಂಪನಿಗಳು ಆಕ್ಸಿಜನ್ ಉತ್ಪಾನೆ ಹಾಗೂ ಸರಬರಾಜಿನ ಜವಾಬ್ದಾರಿ ವಹಿಸಿಕೊಂಡಿವೆ.. ಆದ್ರೂ ಅಗತ್ಯ ಪ್ರಮಾಣದಲ್ಲಿ ಅದ್ರಲ್ಲೂ ಕರ್ನಾಟಕಕ್ಕೆ ಯಾಕೆ ಬೇಕಾದ ಪ್ರಮಾಣದಲ್ಲಿ ಆಕ್ಸಿಜನ್ ಪೂರೈಕೆಯಾಗುತ್ತಿಲ್ಲ ಎನ್ನುವುದು ಪ್ರಶ್ನೆ..
ಇನ್ನೂ ಮತ್ತೊಂದು ಜನರನ್ನ ಮುಖ್ಯವಾಗಿ ಕಾಡ್ತಿರುವ ಪ್ರಶ್ನೆ ಅಂದ್ರೆ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ. ಕೋವಿಡ್ ಮೊದಲನೇ ಅಲೆ ವೇಳೆಯೇ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಅವ್ಯವಸ್ಥೆಗಳು ಕಂಡುಬಂದಿದ್ದವು. ಆದ್ರೆ 2ನೇ ಅಲೆ ವೇಳೆಗೆ ಕೆಲ ಬದಲಾವಣೆಗಳು ಕಂಡುಬರುವ, ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುವ , ಕೆಲ ಸುಧಾರಣೆಗಳನ್ನ ತರುವ ನಿರೀಕ್ಷೆ ಇತ್ತು.. ಆದ್ರೆ ಅದು ಈಗ ಹುಸಿಯಾಗಿದೆ ಎನ್ನಬಹುದು.. ಕಾರಣ ದೇಶಾದ್ಯಂತ ಅನೇಕ ಜಿಲ್ಲಾ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ, ಆಕ್ಸಿಜನ್ ಕೊರತೆ ಇರಬಹುದು, ಇಲ್ಲಾ ಲಂಚ ಪೀಕುತ್ತಿರುವ ಪ್ರಕರಣಗಳಿರಬಹುದು.. ಸ್ವಚ್ಛತೆ ಅಂತು ದೂರ ದೂರದವರೆಗೂ ಎಲ್ಲೂ ಕಂಡುಬರುತ್ತಿಲ್ಲ. ಮತ್ತೊಂದೆಡೆ ಹಲವೆಡೆ ಸೋಂಕಿತರನ್ನ ಪ್ರತ್ಯೇಕವಾಗಿರಿಸದೇ ಎಲ್ಲರನ್ನೂ ಒಟ್ಟಾಗಿ ನೆಲದ ಮೇಲೆಯೇ ಮಲಗಿಸಿರುವ ಪ್ರಕರಣಗಳು ಕಂಡುಬರುತ್ತಿವೆ..
ಅಲ್ಲದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಜನರ ಸಾವಿನ ಮೇಲೆ ಕೆಲ ಕಿಡಿಗೇಡಿಗಳು ದುಡ್ಡು ಸಂಪಾದನೆಗೆ ಇಳಿದಿರುವುದು ಕಂಡುಬರುತ್ತಿದೆ.. ಹಲವೆಡೆ ಬೆಡ್ ಬ್ಲಾಕಿಂಗ್ ದಂಧೆಯ ಆರೋಪಗಳು ಕೇಳಿ ಬಂದಿವೆ.. ಇನ್ನೂ ಕೆಲವೆಡೆ ಮೃತಪಟ್ಟವರ ಶವ ಸಾಗಿಸಲು ಆಂಬ್ಯುಲೆನ್ಸ್ ಸಿಬ್ಬಂದಿಯೂ 20 ರಿಂದ 30 ಸಾವಿರ ಹಣವನ್ನ ಬಡವರಿಂದ ಪೀಕುತ್ತಿರುವುದು, ಮೃತದೇಹ ಅಂತ್ಯಸಂಸ್ಕಾರಕ್ಕೂ ಸಾವಿರಾರು ರೂಪಾಯಿಗಳನ್ನ ಬೇಡಿಕೆಯಿಟ್ಟಿರುವಂತಹ ಅನೇಕ ಕೇಸ್ ಗಳು ಆಗಾಗ ಬರುತ್ತಲೇ ಇದೆ..
ಮೊದಲನೇ ಅಲೆ ನಂತರ ಪರಿಸ್ಥಿತಿ ಸುದಾರಣೆ ಆಗುತ್ತೆ ಅನ್ನೋ ನಿರೀಕ್ಷೆ ಇತ್ತು.. ಅದ್ರಲ್ಲೂ ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಅತೀವ ಭರವಸೆ ಇತ್ತು.. ಆದ್ರೆ ಎಲ್ಲೋ ಒಂದು ಕಡೆ ಆ ನಿರೀಕ್ಷೆ ಸುಳ್ಳಾಗಿದೆ..
ಅನೇಕ ಕಡೆಗಳಲ್ಲಿ ಕೃತಕ ಆಸ್ಪತ್ರೆಗಳ ನಿರ್ಮಾಣ ಮಾಡಿದ್ರೂ ಕೂಡ ಯಾವುದೇ ಪ್ರಯೋಜನಗಳಾಗುತ್ತಿಲ್ಲ. ಅದ್ರಲ್ಲೂ ಮೊದಲನೇ ಅಲೆ ಸಂದರ್ಭದಲ್ಲಿ ಅನೇಕ ವೆಂಟಿಲೇಟರ್ ಗಳು, ಕೊರೊನಾ ವೈದ್ಯಕೀಯ ಉಪಕರಣಗಳ ಖರೀದಿ ಮಾಡಿತ್ತು ಸರ್ಕಾರ. ಮತ್ತೊಂದೆಡೆ PM ನಿಧಿ ಸಂಗ್ರಹದ ಬಗ್ಗೆಯೂ ಯಾವುದೇ ಲೆಕ್ಕ ಪತ್ರಗಳಿಲ್ಲ.. ಕೋವಿಡ್ ನೆರವಿಗಾಗಿ ಅದೆಷ್ಟೋ ದೇಣಿಗೆ ಹರಿದುಬರುತ್ತಿದೆ.. ಎಲ್ಲೋ ಕೆಲವು ಆಸ್ಪತ್ರೆಗಳಿಗೆ ದೇಣಿಗೆ ಸಿಕ್ಕಿ ಬದಲಾವಣೆಯಾಗಿರಬಹುದು.. ಆದ್ರೂ ದೇಶದ ಜಿಲ್ಲಾ ಮಟ್ಟದಲ್ಲಿ ಬಹುತೇಕ ಬಹುತೇಕ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ದೇಣಿಗೆ ಮಾತ್ರ ಬಂದು ತಲುಪಿಲ್ಲ. ಯಾವುದೇ ಬದಲಾವಣೆಗಳನ್ನ ಕಂಡಿಲ್ಲ..
ಇನ್ನೂ ಕೋವಿಡ್ 2 ನೇ ಅಲೆ ಅಪ್ಪಳಿಸುವುದಕ್ಕೂ ಮುನ್ನ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ 20 % ರಷ್ಟು ಮಾತ್ರ ಆಕ್ಸಿಜನ್ ಕೊರತೆಯಿತ್ತು.. ಆದ್ರೆ ಈಗ 70 % ಆಗಿದೆ..
ಸರ್ಕಾರ ಏನು ಕ್ರಮ ಕೈಗೊಳ್ಳಬಹುದಾಗಿತ್ತು… ?
ಇಂತಹ ಪರಿಸ್ಥಿತಿ ನಡುವೆ ಸರ್ಕಾರ ದೇಶಾದ್ಯಂತ ಜಿಲ್ಲಾ ಮಟ್ಟಗಳ ಸರ್ಕಾರಿ ಆಸ್ಪತ್ರೆಗಳ ವ್ಯಾಪ್ತಿಯಲ್ಲಿ ಆಕ್ಸಿಜನ್ ಘಟಕಗಳ ನಿರ್ಮಾಣ ಕಾರ್ಯ ಕೈಗೊಳ್ಳಬಹುದಾಗಿತ್ತು.. ಆದ್ರೆ ಸರ್ಕಾರ ಯಾಕೆ ಇಂತಹ ಕ್ರಮಕ್ಕೆ ಮುಂದಾಗಿಲ್ಲ ಎನ್ನುವ ಪ್ರಶ್ನೆಯೂ ಸಹ ಎದ್ದಿದೆ.. ಬೇರೆ ದೇಶಗಳಿಂದ ಆಕ್ಸಿಜನ್ ತೆರೆಸಿಕೊಳ್ತಿರುವ ಸರ್ಕಾರಕ್ಕೆ ದೇಶದ ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆಗಳ ವ್ಯಾಪ್ತಿಯಲ್ಲಿ ಆಮ್ಲಜನಕ ಉತ್ಪಾದನ ಘಟಕ ಸ್ಥಾಪನೆಗೆ ಇನ್ನೂ ದಿನಗಳ ಕಾಲಾವಕಾಶ ಬೇಕಾಗುತ್ತೆ…? ಸರ್ಕಾರ ಯಾಕೆ ಈ ಬಗ್ಗೆ ಹರಿಸುತ್ತಿಲ್ಲ.. ಯಾವ ಲಾಬಿ ಇವರನ್ನ ತಡೆಯುತ್ತಿದೆ… ಅನ್ನೋದು ಸಹಜವಾಗಿ ಕಾಡುವ ಪ್ರಶ್ನೆ..
ಒಟ್ನಲ್ಲಿ ಆಕ್ಸಿಜನ್ ಪೂರೈಕೆಗಾಗಿ ಸರ್ಕಾರ ಎಲ್ಲಿಯವರೆಗೂ ಆಯಾ ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆಗಳ ವ್ಯಾಪ್ತಿಯಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ನಿರ್ಮಾಣ ಮಾಡುವುದಿಲ್ಲವೋ ಅಲ್ಲಿಯವರೆಗೂ ಆಕ್ಸಿಜನ್ ಕೊರತೆಯಿಂದಾಗಿ ಆಗುವ ಅನಾಹುತಗಳು ಕಡಿಮೆಯಾಗುವುದಿಲ್ಲ..







