ಲಸಿಕೆ ವಿಚಾರದಲ್ಲಿ ಕೇಳಿ ಬಂದಿರುವ ಆರೋಪಗಳು ಆಧಾರ ರಹಿತವೆಂದ ಕೇಂದ್ರ ಗೃಹ ಸಚಿವಾಲಯ
ನವದೆಹಲಿ : ದೇಶದಲ್ಲಿ ಕೊರೊನಾ 2ನೇ ಅಲೆ ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಸಲ್ಲ.. ಅನೇಕರು ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ರೆ, ಎಷ್ಟೋ ಮಕ್ಕಳು ಅನಾಥವಾಗಿವೆ.. ಮತ್ತೆ ಕೆಲವರು ಸ್ನೇಹಿತರು ಆಪ್ತರನ್ನ ಕಳೆದುಕೊಂಡಿದ್ದಾರೆ.. ಈ ನಡುವೆ ಇತ್ತೀಚೆಗೆ ಕೋವಿಡ್ 2ನೇ ಅಲೆ ಇಳಿಮುಖವಾಗ್ತಿದೆ..
ಲಸಿಕೆಯ ಅಭಿಯಾನವೂ ಬಿರುಸಿನಿಂದ ಸಾಗ್ತಿದೆ.. ಆದ್ರೆ ಲಸಿಕೆ ವಿಚಾರದಲ್ಲಿ ಸಾಕಷ್ಟು ಆರೋಪಗಳು ಸಹ ಅರ್ಕಾರ , ಅಧಿಕಾರಿಗಳ ವಿರುದ್ಧ ಕೇಳಿಬರುತ್ತಿವೆ. ರಾಜ್ಯಗಳಿಗೆ ಲಸಿಕೆ ವಿತರಣೆಯಲ್ಲಿ ಅನ್ಯಾಯವಾಗ್ತಿದೆ ಎಂಬ ಆರೋಪಗಳನ್ನ ಇದೀಗ ಕೇಂದ್ರ ಸರ್ಕಾರ ಅಲ್ಲೆಗಳೆದಿದೆ..
ಪಾರದರ್ಶಕವಾದ ಕ್ರಮದಲ್ಲಿಯೇ ಆಯಂಟಿ ಕೋವಿಡ್ 19 ಲಸಿಕೆಗಳನ್ನು ಪೂರೈಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಆಯಾಯ ರಾಜ್ಯಗಳಿಗೆ ಬೇಕಾದಷ್ಟು, ರಾಜ್ಯವಾರು ಜನಸಂಖ್ಯೆ ಹಾಗೂ ಕೋವಿಡ್ ಪಗರಕರಣಗಳು, ಪಾಸಿಟಿವಟಿ ರೇಟ್ ಹಾಗೂ ಪರಿಣಾಮಕಾರಿ ಬಳಕೆ, ಪೋಲು ಪ್ರಮಾಣಗಳ ಆಧಾರದ ಮೇಲೆ ರಾಜ್ಯಗಳಿಗೆ ಕೇಂದ್ರದಿಂದ ಲಸಿಕೆಗಳನ್ನು ನೀಡಲಾಗುತ್ತಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಕೇಂದ್ರ ಸರ್ಕಾರದ ಲಸಿಕೆ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ. ಹೀಗೆ ಹತ್ತು ಹಲವು ಲಸಿಕೆಯ ಪೂರೈಕೆ ವಿಚಾರದಲ್ಲಿ ಕೇಳಿ ಬಂದಿರುವ ಆರೋಪಗಳ ಹಿನ್ನೆಲೆಯಲ್ಲಿ ಪಾರದರ್ಶಕವಲ್ಲದ ರೀತಿಯಲ್ಲಿ ರಾಜ್ಯಗಳಿಗೆ ಲಸಿಕೆಯನ್ನು ಪೂರೈಕೆಯಾಗಿದೆ. ಲಸಿಕೆ ವಿಚಾರದಲ್ಲಿ ಕೇಳಿ ಬಂದಿರುವ ಆರೋಪಗಳು ಆಧಾರ ರಹಿತವಾಗಿವೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.








