ಕೇವಲ 3 ಗಂಟೆಯಲ್ಲೇ ಲಸಿಕೆಗಾಗಿ 80 ಲಕ್ಷ ಜನರ ನೋಂದಣಿ
ನವದೆಹಲಿ : 18ರಿಂದ 44 ವರ್ಷದೊಳಗಿನವರು ಮೇ 1ರಿಂದ(ಶನಿವಾರ)ಕೋವಿಡ್ ಲಸಿಕೆಗಳನ್ನು ಪಡೆಯಬಹುದು ಎಂದು ಸರಕಾರ ತಿಳಿಸಿದೆ. ಇದರ ಬೆನ್ನಲ್ಲೇ ಬುಧವಾರ ಸಂಜೆ 4 ಗಂಟೆಯಿಂದಲೇ ಸರಕಾರದ ವೆಬ್ ಸೈಟ್ ಕೋವಿನ್ ಕೋವಿಡ್ ಲಸಿಕೆಯ ನೋಂದಣಿಗೆ ತೆರೆದುಕೊಂಡಿದೆ. ನೋಂದಣಿ ಪ್ರಕ್ರಿಯೆ ಆರಂಭವಾಗಿ ಕೇವಲ 3 ಗಂಟೆಗಳಲ್ಲಿ ಸುಮಾರು 80 ಲಕ್ಷ ಮಂದಿ ತಮ್ಮಹೆಸರು ನೋಂದಾಯಿಸಿದ್ದಾರೆ.
ಆರಂಭದಲ್ಲಿ ವೆಬ್ ಸೈಟ್ ನಲ್ಲಿ ಸರ್ವರ್ ಸಮಸ್ಯೆ ಕಾಣಿಸಿಕೊಂಡು ಸ್ವಲ್ಪ ಸಮಯ ಸ್ಥಗಿತಗೊಂಡಿತ್ತು. ಸರ್ವರ್ ಡೌನ್ ಆಗಿ ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ಬಳಿಕ ಅದು ಸರಿ ಹೋಗಿತ್ತು. ಇನ್ನೂ ಸರಕಾರಿ ಹಾಗೂ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಲಭ್ಯವಿರುವ ಸ್ಲಾಟ್ ಗಳ ಆಧಾರದ ಮೇಲೆ ನೊಂದಣಿದಾರರಿಗೆ ಅಪಾಯಿಂಟ್ ಮೆಂಟ್ ನೀಡಲಾಗುತ್ತದೆ.
ನೊಂದಣಿ ಪ್ರಕ್ರಿಯೆ
ಮೊದಲಿಗೆ https://www.cowin.gov.in/home ವೆಬ್ ಸೈಟ್ ಗೆ ಹೋಗಬೇಕು. ರಿಜಿಸ್ಟರ್/ಸೈನ್-ಇನ್ ಗೆ ಕ್ಲಿಕ್ ಮಾಡಬೇಕು. ಕೋವಿನ್ ಪೋರ್ಟಲ್ ಕಾರ್ಯನಿರ್ವಹಿಸುತ್ತಿದೆ.