ಮಾರುತಿ ಓಮ್ನಿ ಮತ್ತು ಬಸ್ಸಿನ ನಡುವೆ ಮಂಗಳೂರಿನಲ್ಲಿ ಅಫಘಾತ – ಇಬ್ಬರ ಸಾವು

1 min read

ಮಾರುತಿ ಓಮ್ನಿ ಮತ್ತು ಬಸ್ಸಿನ ನಡುವೆ ಮಂಗಳೂರಿನಲ್ಲಿ ಅಫಘಾತ – ಇಬ್ಬರ ಸಾವು

ಮಾರುತಿ ಓಮ್ನಿ ಕಾರು ಮತ್ತು ಎಕ್ಸ್ ಪ್ರೆಸ್ ಬಸ್ಸಿನ ನಡುವೆ ಅಫಘಾತ ಸಂಭವಿಸಿ ಇಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉಡುಪಿ ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಾವಂಜೆ ಸಮೀಪ ನಡೆದಿದೆ.  ಅಪಘಾತದಲ್ಲಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ಹಳೆಯಂಗಡಿ ಒಳ ರಸ್ತೆಯಿಂದ  ಪಾವಂಜೆ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವಾಗ  ಕಾರು ಮಂಗಳೂರಿನಿಂದ ಬರುತ್ತಿದ್ದ ಬಸ್ಸಿಗೆ ನೇರವಾಗಿ ಡಿಕ್ಕಿಹೊಡೆದಿದೆ. ಪರಿಣಾಮ ಮುಕ್ಕಪಡ್ರೆ ನಿವಾಸಿಗಳಾದ  ಭುಜಂಗ ಮತ್ತು ವಸಂತ ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  ಕಾರು ಚಾಲಕ ಬಾಲಕೃಷ್ಣ ಸಹ ಗಂಭಿರವಾಗಿ ಗಾಯಗೊಂಡಿದ್ದು  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 crash in Mangalore between Maruti Omni and bus – 2 died

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd