Crime | ಬೆಂಗಳೂರಿಗರೇ ಎಚ್ಚರ.. ಬೆಳ್ಳಂಬೆಳಗ್ಗೆ ಲಾಂಗ್ ತೋರಿಸಿ ದರೋಡೆ
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಂಡ ಪೋಕರಿಗಳ ಹಾವಳಿ ಹೆಚ್ಚಾಗಿದೆ.
ಇವರಿಗೆ ಪೊಲೀಸರ ಭಯ ಇಲ್ಲವಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಯಾಕಂದರೇ ನಗರದ ನಂದಗೋಕುಲ ಲೇಔಟ್ ನಲ್ಲಿ ಬೆಳ್ಳಂಬೆಳಿಗ್ಗೆ ಲಾಂಗ್ ತೋರಿಸಿ ರಾಬರಿ ಮಾಡಲಾಗಿದೆ.
ಜುಲೈ 18 ರ ಬೆಳಗ್ಗೆ 6 ಗಂಟೆಗೆ ಲಾಂಗ್ ತೋರಿಸಿ ದರೋಡೆ ಮಾಡಲಾಗಿದೆ.

ನಡೆದುಕೊಂಡು ಬರ್ತಿದ್ದ ಯುವಕನಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಲಾಗಿದೆ.
ನಂತರ ಮೊಬೈಲ್ ಹಾಗೂ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಈ ಘಟನೆ ಸಂಬಂಧ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದೂರು ದಾಖಲಿಸಿಕೊಂಡು ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.