ಅತ್ತೆಯ ಕಣ್ಣು ಕಿತ್ತು ಹೊರಹಾಕಿ , ಭೀಕರವಾಗಿ ಹತ್ಯೆ ಮಾಡಿದ ಸೊಸೆ : ಕಾರಣ..!
ಬಿಹಾರ: ಮಗುವಾಗಿಲ್ಲ ಎಂದು ನಿರಂತರ ಕಿರುಕುಳ ನೀಡ್ತಿದ್ದ ಅತ್ತೆಯನ್ನ ಸೊಸೆ ಅತ್ಯಂತ ಕ್ರೂರವಾಗಿ ಕೊಂದಿರುವ ಘಟನೆ ಬಿಹಾರದ ಪಟ್ನಾ ಸಮೀಪದ ಪರ್ಸಾ ಬಜಾರ್ ಗ್ರಾಮದಲ್ಲಿ ನಡೆದಿದೆ. ಅತ್ತೆಯ ಕೊಂಕು ಮಾತುಗಳಿಂದ ನೊಂದಿದ್ದ ಸೊಸೆ (33) ಲಲಿತಾ ದೇವಿ, ಾಕೆಯ ಅತ್ತೆ ಧರ್ಮಶೀಲ ದೇವಿಯನ್ನ ಬರ್ಬರವಾಗಿ ಹತ್ಯೆಗೈದಿದ್ದಾಳೆ. ಮಗುವಾಗಿಲ್ಲ ಎಂಬ ಕೊರಗಿನ ನಡುವೆ ಅತ್ತೆಯ ಕೊಂಕು ಮಾತುಗಳಿಂದ ಮಾನಸಿಕವಾಗಿ ತೀರ ನೊಂದುಹೋಗಿದ್ದ ಲಲಿತಾ ಮನೆಯಲ್ಲಿ ಗಂಡ, ಮಾವ ಇಲ್ಲದಾಗ ಆಕೆಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾಳೆ. ಅತ್ತೆಯನ್ನ ಚಾಕುವಿನಿಂದ ಹಲವು ಬಾರಿ ಚುಚ್ಚಿದ್ದಾಳೆ.
ತಾಯಿಯಾದ ಬಳಿಕ ಅಪ್ರಾಪ್ತೆಯನ್ನ ಮದುವೆಯಾಗಲು ಒಪ್ಪಿದ ವಿವಾಹಿತ ಆರೋಪಿಗೆ ಜಾಮೀನು..!
ಅಲ್ಲದೇ, ಆಕೆಯ ಕಣ್ಣು ಕಿತ್ತು ಹೊರಹಾಕಿದ್ದಾಳೆ. ಇದಾದ ಬಳಿಕ ತಾನು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ. ಈ ಸಂದರ್ಭದಲ್ಲಿ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ. ಬೆಂಕಿ ಹಂಚಿಕೊಂಡು ಹತ್ಯೆಗೆ ಮುಂದಾದ ಹಿನ್ನಲೆ ಆಕೆಯ ದೇಹ ಭಾಗಶಃ ಸುಟ್ಟಿ ಹೋಗಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ರಕ್ತದ ಮಡುವಿನಲ್ಲಿದ್ದ ಚಾಕುವನ್ನು ವಶಕ್ಕೆ ಪಡೆದು, ಕಣ್ಣನ್ನು ಫೋರೆನ್ಸಿಕ್ ಲ್ಯಾಬ್ ಗೆ ಕಳುಹಿಸಿದ್ದಾರೆ. ಇನ್ನೂ ಆತ್ಮಹತ್ಯೆಗೆ ಯತ್ನಿಸಿದ ಲಲಿತಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ಸೊಸೆಯ ವಿರುದ್ಧ ಆಕೆಯ ಮಾವ ರಾಮ್ ಕುಮಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರೀತಿಗೆ ಒಪ್ಪದ ಯುವತಿಯನ್ನ ನಡುರಸ್ತೆಯಲ್ಲೇ ಕೊಚ್ಚಿ ಕೊಂದ ಪಾಗಲ್ ಪ್ರೇಮಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel