ಕಾಮುಕ ತಂದೆ ಹಾಗೂ ಆತನ ಸ್ನೇಹಿತನಿಂದ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ..!
ರಾಜಸ್ಥಾನ : 15 ವರ್ಷದ ಬಾಲಕಿಯ ಮೇಲೆ ಆಕೆಯ ತಂದೆ ನಿರಂತರ ಅತ್ಯಾಚಾರವೆಸಗಿದ್ದಾನೆ. ಇದಾದ ಬಳಿಕ ಆತನ ಸ್ನೇಹಿತ ಬಾಲಕಿಯನ್ನ 28 ದಿನಗಳ ಕಾಲ ಬಂಧನದಲ್ಲಿಟ್ಟುಕೊಂಡು ನಿರಂತರ ಅತ್ಯಾಚಾರವೆಸಗಿದ್ದಾನೆ. ಕಾಮುಕರ ಕೈಯಿಂದ ಸಂತ್ರಸ್ತ ಬಾಲಕಿ ತಪ್ಪಿಸಿಕೊಂಡು ಪೊಲೀಸರ ಬಳಿ ದೂರು ದಾಖಲು ಮಾಡಿದ್ದಾಳೆ. ಪೊಲೀಸರು ಆರೋಪಿ ತಂದೆಯನ್ನ ಬಂಧಿಸಿ ಮತ್ತೊಬ್ಬ ಕಾಮುಕನಿಗಾಗಿ ಹುಡುಕಾಡುತ್ತಿದ್ದಾರೆ.
ಬಾಲಕಿ ಆರೋಪದ ಪ್ರಕಾರ ಆಕೆಯ ತಂದೆ ಸತತ 2 ವರ್ಷಗಳ ಕಾಲ (13 ವರ್ಷದವಳಾಗಿದ್ದಾಗಿನಿಂದಲೇ ಲೈಂಗಿಕ ದೌರ್ನ್ಯ ನಡೆದಿದೆ) ನಿರಂತರ ಆಕೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಆದ್ರೆ ಈ ವಿಚಾರ ತಾತನಿಗೆ ತಿಳಿಯುತ್ತಿದ್ದಂತೆ ಕಾಮುಕ ತಂದೆ ಬಾಲಕಿಯನ್ನ ಬೇರೆ ಮನೆಗೆ ಕರೆದೊಯ್ದು ಪ್ರತ್ಯೇಕವಾಗಿರಲಾರಂಭಿಸಿದ್ದ.
ಬಳಿಕ ಅಲ್ಲಿಗೆ ತಂದೆಯ ಸ್ನೇಹಿತ ಬಂದು 28 ದಿನಗಳ ಕಾಲ ಸತತ ಆಕೆಯ ಮೇಲೆ ಅತ್ಯಾಚಾರವೆಸಗಿದ್ಧಾನೆ. ಅಲ್ಲಿಂದ ಆಕೆ ಎಸ್ಕೇಪ್ ಆಗಿದ್ದು, ತಾತನ ಬಳಿಗೆ ಬಂದು ನಡೆದಿರುವ ವಿಚಾರವನ್ನೆಲ್ಲಾ ಹೇಳಿಕೊಂಡಿದ್ದಾಳೆ. ಬಳಿಕ ಆಕೆಯ ತಾತ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತಂದೆಯನ್ನ ಬಂಧಿಸಿರುವ ಪೊಲೀಸರು ಮತ್ತೊಬ್ಬನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಸಾಲ ನೀಡಲು ತಡವಾಗಿದ್ದಕ್ಕೆ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಲಿಕ್ಕರ್ ದಂಧೆ ಮಾಲೀಕನ ಮಗ..!
ಅತ್ಯಾಚಾರಿಗಳಿಂದ ಪಾರಾಗಲೂ 3ನೇ ಮಹಡಿಯಿಂದ ಜಿಗಿದ ಯುವತಿ – ಸಂಚು ರೂಪಿಸಿದ್ದು ಮತ್ತೊಬ್ಬ ಹೆಣ್ಣಿನ ರೂಪದ ರಾಕ್ಷಸಿ..!
ಸೆಲ್ಫಿ ಗಂಡಾಂತರ… ರೈಲಿನ LPG ಟ್ಯಾಂಕ್ ಮೇಲೆ ಹತ್ತಿ ಸೆಲ್ಫಿ ತೆಗೆಯುತ್ತಿದ್ದ ಬಾಲಕನಿಗೆ ಕರೆಂಟ್ ಶಾಕ್..!