ಬಾಲಕಿಗೆ ಲೈಂಗಿಕ ಕ್ರಿಯೆಯ ವಿಡಿಯೋಗಳನ್ನ ಕಳುಹಿಸುತ್ತಿದ್ದ ಮಹಿಳೆ ವಿರುದ್ಧ ಕೇಸ್..!
ಮಧ್ಯಪ್ರದೇಶ : 10 ವರ್ಷದ ಮೇಲ್ಟಟ್ಟ 18 ವರ್ಷದ ಒಳಗಿನ ವಯಸ್ಸು ತುಂಬಾ ನಾಜೂಕಾಗಿರುತ್ತೆ.. ಈ ವಯಸ್ಸಿನ ಅಂತರದ ಮಕ್ಕಳಿಗೆ ಯಾವುದೇ ಒಂದು ವಿಚಾರದ ಪ್ರಭಾವ ಗಾಢವಾಗಿ ಬೀರುತ್ತೆ.. ಹೀಗಾಗಿಯೇ ಕೆಲವೊಂದು ವಿಚಾರಗಳಿಂದ ಮಕ್ಕಳನ್ನ ದೂರವಿರಿಸಿ ಅವರನ್ನ ನೆಗೆಟಿವಿಟಿ ಇಂದ ದೂರವಿಡಲಾಗುತ್ತೆ.. ಆದ್ರೆ ಇಲ್ಲೊಬ್ಬ ಖತರ್ನಾಕ್ ಆಂಟಿ 11 ವರ್ಷದ ಬಾಲಕಿಗೆ ಸೆಕ್ಸ್ ವಿಡಿಯೋಗಳನ್ನ ಕಳುಹಿಸುತ್ತಿದ್ದ ಕಾರಣಕ್ಕೆ ಆಕೆ ವಿರುದ್ಧ ಇದೀಗ ಎಫ್ ಐ ಆರ್ ದಾಖಲಾಗಿದೆ.
ಇಂತಹದೊಂದು ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.. ಆರೋಪಿ ಮಹಿಳೆ ಭೋಪಾಲ್ ನಲ್ಲಿ ವಾಸವಾಗಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿದ್ದು, ಬಂಧನಕ್ಕೆ ಮುಂದಾಗಿದ್ದಾರೆ.
ಪ್ರಕರಣದ ಕುರಿತು ಮಾಹಿತಿ ನೀಡಿರುವ ಗ್ವಾಲಿಯರ್ ಠಾಣೆಯ ಇನ್ಸ್ಪೆಕ್ಟರ್ ಸಂಜೀವ್ ಶರ್ಮಾ, ಜನ್ಕಂಗಜ್ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ತನ್ನ 11 ವರ್ಷದ ಮಗಳ ಮೊಬೈಲ್ ಗೆ ಮಧ್ಯ ವಯಸ್ಕ ಮಹಿಳೆ ಪ್ರತಿನಿತ್ಯ ಅಶ್ಲೀಲ ವೀಡಿಯೋ ಕಳುಹಿಸುತ್ತಿರುವ ಬಗ್ಗೆ ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ.
ಈ ರೀತಿ ವೀಡಿಯೋ ಕಳಿಸೋದು ನಿಲ್ಲಿಸುವಂತೆ ತಿಳಿ ಹೇಳಿದ್ರೂ ಮಹಿಳೆ ಕೇಳುತ್ತಿಲ್ಲ. ಇದರಿಂದ ಮಾನಸಿಕವಾಗಿ ನೊಂದಿದ್ದೇವೆ. ಈ ಘಟನೆ ನಮ್ಮ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ವ್ಯವಹಾರಕ್ಕ ಸಂಬಂಧಿಸಿದ ವಿಷಯವಾಗಿ ಪತಿಗೂ ಮತ್ತು ಮಹಿಳೆ ನಡುವೆ ವಿವಾದ ಉಂಟಾಗಿದೆ. ಆದ್ದರಿಂದ ಈ ರೀತಿ ವೀಡಿಯೋ ನೀಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾಳೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಮಹಿಳೆ ದೂರಿನ ಅನ್ವಯ ಪೋಕ್ಸೋ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದರ ಜೊತೆ ಐಟಿ ಆ್ಯಕ್ಟ್ ಅಡಿಯಲ್ಲಿಯೂ ಪ್ರಕರಣ ದಾಖಲಾಗಿದ್ದು, ಮಹಿಳೆಯ ಬಂಧನಕ್ಕಾಗಿ ನಮ್ಮ ತಂಡ ಭೋಪಾಲ್ ಗೆ ತೆರಳಿದೆ. ಮಹಿಳೆಯ ಬಂಧನದ ಬಳಿಕ ವಿಚಾರಣೆ ನಡೆಸಲಾಗುವುದು ಎಂದು ಸಂಜೀವ್ ಶರ್ಮಾ ಹೇಳಿದ್ದಾರೆ.