Crime ಸಹೋದರಿಯ ಗಂಡನಿಗಾಗಿ ಐವರನ್ನ ಕೊಲೆ ಮಾಡಿದ ಹಂತಕಿ – ಪ್ರಕರಣದ ಅಪ್ ಡೇಟ್ಸ್…
ಮಂಡ್ಯ : ಒಂದೇ ಕುಟುಂಬದ ಐವರ ಕೊಲೆ ಪ್ರಕರಣದಲ್ಲಿ ಮತ್ತೊಂದಷ್ಟು ವಿಚಾರಗಳು ಬೆಳಿಗೆ ಬಂದಿವೆ.. ಚಿಕನ್ ಶಾಫ್ ನಿಂದ ಕೆಲಸವಿದೆ ಎಂದು ಆರೋಪಿ ಮಚ್ಚು ತಂದಿದ್ದ ಬಗ್ಗೆ ಗೊತ್ತಾಗಿದೆ.. ಪ್ರಕರಣ ಸಂಬಂಧ ಮಂಡ್ಯ ಎಸ್ಪಿ ಎನ್.ಯತೀಶ್ ಪ್ರತಿಕ್ರಿಯೆ ನೀಡಿದ್ದಾರೆ.
ಫೆ.5 ರಂದು ಐವರ ಕೊಲೆಯಾಗಿತ್ತು. ಪ್ರಕರಣ ತನಿಖೆ ಸಂದರ್ಭದಲ್ಲಿ ದೊರೆತ ಪ್ರಮುಖ ಸಾಕ್ಷಿಯಿಂದ ಮೈಸೂರಿನ ಬೆಲವತ್ತ ಮಹಿಳೆಯನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ವಿ.. ವಿಚಾರಣೆ ವೇಳೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.. ಆಕೆ ಮೃತ ಲಕ್ಷ್ಮಿಯ ಸೋದರ ಸಂಬಂಧಿ..
ಮೃತ ಲಕ್ಷ್ಮಿ ಮನೆಗೆ ಬಂದು ಹೋಗುತ್ತಿದ್ದಳು.. ಮೃತ ಲಕ್ಷ್ಮಿ ಪತಿ ಗಂಗಾರಾಮ್ ನೊಂದಿಗೆ ಸಲುಗೆ ಬೆಳೆದಿದೆ.. ಸಲುಗೆಯಿಂದ ಇರಲು ಮೃತ ಲಕ್ಷ್ಮಿ ಅಡ್ಡಿಪಡಿಸಿದ್ದಾಳೆ.. ಇದರಿಂದ ಕೊಲೆಗೆ ಸಂಚು ರೂಪಿಸಕಲಾಗಿತ್ತು..
ಅದರಂತೆ ಫೆ.5 ರಂದು ಕೆ.ಆರ್.ಎಸ್ ಗೆ ಬಂದು ಕೊಲೆ ಮಾಡಲಾಗಿದೆ.. ರಾತ್ರಿ ನಿದ್ರೆಗೆ ಜಾರಿದ ವೇಳೆ ಮಚ್ಚು ಹಾಗು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಲಾಗಿದೆ.. ಆರೋಪಿ ಮಾಡಿದ್ದ ಕರೆಗಳು, ಟೆಕ್ನಿಕಲ್ ಸಾಕ್ಷಿಗಳು ಆಕೆಯ ಮೇಲೆ ಅನುಮಾನ ಮೂಡಿಸಿತ್ತು. ಅದರ ಮೇಲೆ ವಿಚಾರಣೆ ನಡೆಸಿದ್ವಿ..
ಆರೋಪಿ ಲಕ್ಷ್ಮಿ ಹಾಗು ಗಂಗಾರಾಮ್ ಸಲುಗೆಯನ್ನ ಮೃತ ಲಕ್ಷ್ಮಿ ಪ್ರಶ್ನಿಸುತ್ತಿದ್ದಳು.. ಇದರಿಂದ ಆಗಾಗೆ ಜಗಳವಾಗ್ತಿತ್ತು.. ಒಬ್ಬಳೆ ಎಲ್ಲರನ್ನು ಕೊಲೆ ಮಾಡಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾಳೆ.
ಆದ್ರೆ ಕೊಲೆಗೊಳಾಗದ ಆಹಾರದಲ್ಲಿ ವಿಷ ಏನಾದ್ರು ಹಾಕಿದ್ದಾರ ಎಂದು ಎಫ್ಎಸ್ಐಎಲ್ ಲ್ಯಾಬ್ ಗೆ ಸಾಂಪೆಲ್ ಕಳುಹಿಸಿದ್ದೇವೆ. ಬೆಲವತ್ತದ ಚಿಕನ್ ಶಾಫ್ ನಿಂದ ಕೆಲಸವಿದೆ ಎಂದು ಆರೋಪಿ ಮಚ್ಚು ತಂದಿದ್ದ. ಕೃತ್ಯ ನಡೆಸಿ ವಾಪಸ್ಸು ಫೆ.6 ಬೆಳಿಗ್ಗೆ ಮಚ್ಚನ್ನು ಚಿಕನ್ ಶಾಪ್ ಗೆ ಲಕ್ಷ್ಮಿ ಹಿಂದುರಿಗಿಸಿದ್ಲು ಎನ್ನಲಾಗಿದೆ..
ಬಸ್ ನಲ್ಲೆ ಕೆ.ಆರ್.ಎಸ್ ನಿಂದ ತೆರಳಿದ್ದ ಆರೋಪಿ.. ಬಳಿಕ ಮತ್ತೆ ಬೆಳಿಗ್ಗೆ 7 ಗಂಟೆಗೆ ಕೆಆರ್ಎಸ್ ಗೆ ವಾಪಸ್ಸು ಬಂದಿದ್ದಳು.. ಐದು ಜನರರನ್ನ ಕೊಲೆ ಮಾಡಿ ಮತ್ತೆ ಮೈಸೂರಿಗೆ ತೆರಳಿದ್ಧಳು.. ಬಳಿಕ ಘಟನೆಗೂ ನನಗೂ ಸಂಬಂಧ ಇಲ್ಲ ಅನ್ನುವ ರೀತಿ ಮತ್ತೆ ಕೆಆರ್.ಎಸ್.ಗೆ ಬಂದು ಕಣ್ಣಿರುಟ್ಟಿದ್ದಳು.
ಇದೀಗ ಆರೋಪಿಯನ್ನ ವಶಕ್ಕೆ ಪಡೆದು ಹೆಚ್ಚಿನ ತನಿಖೆ ಮಾಡಲಾಗುತ್ತಿದೆ ಎಂದಿದ್ದಾರೆ.. ಜೊತೆಗೆ ಒಂದೇ ದಿನದಲ್ಲಿ ಪ್ರಕರಣ ಭೇದಿಸಿದ ಪೋಲಿಸರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..








