ಹೆಣ್ಣು ಮಗು ಎಂಬ ಕಾರಣಕ್ಕೆ ಹೆತ್ತ ಮಗುವನ್ನೇ ತೊಟ್ಟಿಗೆಸೆದ ತಾಯಿ..!
ಮುಂಬೈ : ಗಂಡನ ಮನೆಯವರು ಹೆಣ್ಣು ಮಗುವೇ ಬೇಕೆಂದು ಕಿರುಕುಳ ನೀಡ್ತಿದ್ದನ್ನ ಸಹಿಸಲಾರದೇ ಮಹಿಳೆಯೊಬ್ಬರು ತಾನು ಜನ್ಮ ಕೊಟ್ಟ ಹೆಣ್ಣು ಮಗುವನ್ನೇ ತೊಟ್ಟಿಗೆಸೆದು ಅಮಾನವೀಯತೆ ಮೆರೆದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ…
ತನ್ನ ಮೂರು ತಿಂಗಳ ಮಗಳನ್ನು ನೀರಿನ ತೊಟ್ಟಿನಲ್ಲಿ ಮುಳುಗಿಸಿದ್ದಾಳೆ.. ಮಧ್ಯ ಮುಂಬೈನ ಕಲಾಚೌಕಿ ಪ್ರದೇಶದ ಸಂಘರ್ಷ ಸದನ್ ಕಟ್ಟಡದಲ್ಲಿ ಈ ಘಟನೆ ನಡೆದಿದೆ. 36 ವರ್ಷದ ಈಕೆ ಮೊದಲಿಗೆ ತನ್ನ ಮಗುವನ್ನು ಅಪರಿಚಿತ ಮಹಿಳೆಯೊಬ್ಬರು ಮನೆಗೆ ಬಂದು ಅಪಹರಿಸಿದ್ದಾರೆ ಎಂದು ಮಂಗಳವಾರ ಪೊಲೀಸರಿಗೆ ದೂರು ನೀಡಿದ್ದರು.
ತಾಯಿಯ ದೂರಿನ ಆಧಾರದ ಮೇಲೆ ಪೊಲೀಸರು ಅಪಹರಣದ ಎಫ್‌ಐಆರ್ ದಾಖಲಿಸಿದ್ದರು. ಅಷ್ಟೇ ಅಲ್ಲದೇ ಆರೋಪಿ ತಾಯಿಯು ಅಪಹರಣ ಮಾಡಿದ್ದ ಮಹಿಳೆಯ ರೇಖಾಚಿತ್ರವನ್ನು ನೀಡಿ ಹೋಗಿದ್ದಳು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಈ ಪ್ರದೇಶದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು.
ಘಟನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಗುರುವಾರ ಅಪರಾಧ ವಿಭಾಗದ ತಂಡ ದೂರುದಾರರಿಗೆ ಮತ್ತು ಆಕೆಯ ಪತಿಗೆ ಕರೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಹೆಚ್ಚಿನ ತನಿಖೆಯಿಂದಾಗಿ ಆಕೆಯ ಅಸಲಿಯತ್ತು ಬಯಲಾಗಿದೆ.
ತನಿಖೆ ವೇಳೆ ಮನೆಯಲ್ಲಿರುವ ನೀರಿನ ತೊಟ್ಟಿಯಲ್ಲಿ ಮಗುವನ್ನು ಎಸೆದಿರುವುದು ಬಹಿರಂಗವಾಗಿದೆ. ಈ ಸಂಬಂಧ ಆರೋಪಿ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು 2011ರಲ್ಲಿ ಮದುವೆಯಾಗಿದ್ದು, 2013ರಲ್ಲಿ ಆಕೆಗೆ ಹೆಣ್ಣುಮಗು ಜನಿಸಿತ್ತು. ಮಹಿಳೆ ಎರಡನೇ ಬಾರಿಗೆ ಗರ್ಭಿಣಿಯಾದಾಗ, ಆಕೆಯ ಅತ್ತೆ ಮಾವಂದಿರು ಮಗುವಿನ ಲಿಂಗವನ್ನು ನಿರ್ಧರಿಸಲು ಮಾಟಮಂತ್ರ ಮಾಡಿದ್ದರು ಮತ್ತು ಗರ್ಭಪಾತಕ್ಕೆ ಒಳಗಾಗುವಂತೆ ಒತ್ತಾಯಿಸಿದರು. ಇದೇ ರೀತಿ ಮಹಿಳೆಗೆ ಮೂರು ಬಾರಿ ಗರ್ಭಪಾತವನ್ನು ಮಾಡಿಸಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ..








