ಓಡಿ ಹೋಗಿ ಮದುವೆಯಾಗಿದ್ದಕ್ಕೆ ಯುವಕನ ಗುಪ್ತಾಂಗ ಕಟ್ ಮಾಡಿದ ರಾಕ್ಷಸರು
ನವದೆಹಲಿ : ಪ್ರೀತಿಗೆ ಮನೆವರ ವಿರೋಧವಿದ್ದ ಕಾರಣದಿಂದ ಜೋಡಿಯೊಂದು ಓಡಿಹೋಗಿ ಮದುವೆಯಾಗಿದ್ದರು.. ಆದ್ರೆ ಈ ವಿಚಾರ ಗೊತ್ತಾಗಿ ಹುಡುಗಿನ ಕುಟುಂಬದವರು ಯುವಕನ ಗುಪ್ತಾಂಗವನ್ನು ಕಟ್ ಮಾಡಿ ವಿಕೃತಿ ಮರೆದಿದ್ದಾರೆ.. ಇಂತಹ ಅಮಾನವೀಯ ಘಟನೆ ನಡೆದಿರುವುದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ. ಹಲ್ಲೆಗೊಳಗಾದ 22 ವರ್ಷದ ಯುವಕನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಆತನನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಡಿಸೆಂಬರ್ 22ರಂದು ದೆಹಲಿಯ ರಜೌರಿ ಗಾರ್ಡನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೊಲೆ ಯತ್ನ ಮತ್ತು ಅಪಹರಣ ಆರೋಪದಡಿ FIR ದಾಖಲಿಸಲಾಗಿದೆ ಎಂದು ಹೆಚ್ಚುವರಿ ಡಿಸಿಪಿ ಪ್ರಶಾಂತ್ ಗೌತಮ್ ತಿಳಿಸಿದ್ದಾರೆ. ಈ ಇಬ್ಬರು ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಬೇಕು ಎಂದು ನಿರ್ಧರಿಸಿದ್ದರು. ಆದ್ರೆ ಮನೆಯವರು ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇಬ್ಬರು ಗುಟ್ಟಾಗಿ ಮದುವೆಯಾಗಿದ್ದರು. ಇದರಿಂದ ಯುವತಿಯ ಮನೆಯವರು ಸಿಟ್ಟಾಗಿ ಈ ದುಷ್ಕೃತ್ಯವೆಸಗಿದ್ದಾರೆ..
ಅಲ್ಲದೇ ಈ ಜೋಡಿ ರಕ್ಷಣೆಗಾಗಿ ರಾಜೌರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇ ಯುವತಿಯ ಕುಟುಂಬದವರನ್ನ ಮತ್ತಷ್ಟು ಕೆರಳಿಸಿದ್ದು ಎನ್ನಲಾಗಿದೆ.. ಇದೇ ಕಾರಣಕ್ಕೆ ಅವರಿಬ್ಬರೂ ಪೊಲೀಸ್ ಠಾಣೆಯಿಂದ ಹೊರಬಂದ ತಕ್ಷಣ ಹುಡುಗಿಯ ಕುಟುಂಬ ಸದಸ್ಯರು ಅವರನ್ನು ಅಪಹರಿಸಿ, ಅಮಾನುಷವಾಗಿ ಥಳಿಸಿ ಯುವಕನ ಗುಪ್ತಾಂಗವನ್ನು ಕತ್ತರಿಸಿದ್ದಾರೆ. ಇತ್ತ ಯುವಕನ ಸ್ಥಿತಿ ಚಿಂತಾಜನಕವಾಗಿದ್ರೆ , ಅತ್ತ ಪ್ರಕರಣದಲ್ಲಿ ಇಲ್ಲಿಯವರೆಗೂ ಯಾರೊಬ್ಬರನ್ನೂ ಬಂಧಿಸದೇ ಇರೋದು ಅನುಮಾನಗಳನ್ನ ಹುಟ್ಟಿಹಾಕುತ್ತಿದೆ..








