ಮಗಳ ಅತ್ಯಾಚಾರವೆಸಗಿದ ಕಾಮುಕನ ಕುಟುಂಬದ 6 ಜನರ ಕೊಲೆ ಮಾಡಿದ ತಂದೆ..!

1 min read

ಮಗಳ ಅತ್ಯಾಚಾರವೆಸಗಿದ ಕಾಮುಕನ ಕುಟುಂಬದ 6 ಜನರ ಕೊಲೆ ಮಾಡಿದ ತಂದೆ..!

ತಮಿಳುನಾಡು : ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿದ ಕಾಮುಕನ ಮನೆಯಲ್ಲಿ 2 ಮಕ್ಕಳು ಸೇರಿ 6 ಮಂದಿಯನ್ನ ವ್ಯಕ್ತಿಯೊಬ್ಬ ಕ್ರೂರವಾಗಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. 49 ವರ್ಷದ ವ್ಯಕ್ತಿ ತನ್ನ ಮಗಳ ಮೇಲೆ ಅತ್ಯಾಚಾರವೆಸಗಿದ ಕಾಮುಕನ ಕುಟುಂದ 6 ಜನರನ್ನ ಹತ್ಯೆಗೈದಿದ್ದಾನೆ. ಘಟನೆಯಿಮದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಅಲ್ಲದೇ ಮೃತರ ಸಂಬಂಧಿಕರು ಆರೋಪಿಯನ್ನ ಗಲ್ಲಿಗೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

ಭಟ್ಟಿನ ಅಪ್ಪಲರಾಜು ಎಂಬಾತನೇ ಕೊಲೆ ಆರೋಪಿಯಾಗಿದ್ದಾನೆ. ಮೃತರನ್ನ ಉಷಾ ರಾಣಿ (30) , ರಾಮಣ್ಣ (57) , ಅಲ್ಲು ರಮಾದೇವಿ (53) , ನಾಕೇತ್ಲು ಅರುಣ (37) , ಉದಯ್ (4), ಊರ್ವಷಿ ( 6 ತಿಂಗಳ ಮಗು ) ಎಂದು ಗುರುತಿಸಲಾಗಿದೆ. ಮೃತ ಮಕ್ಕಳು ಉಷಾ ರಾಣಿ ಹಾಗೂ ವಿಜಯ್ ಕಿರಣ್ ಎಂಬ ದಂಪತಿಯ ಮಕ್ಕಳು..

ಉಷಾ ರಾಣಿ ತನ್ನ ಮಕ್ಕಳು ಹಾಗೂ ಪತಿಯೊಂದಿಗೆ ವಿಜಯವಾಡದಲ್ಲಿ ನೆಲೆಸಿದ್ದಳು. ಆದ್ರೆ ಚುನಾವಣೆಯಲ್ಲಿ ಮತ ಚಲಾಯಿಸುದಕ್ಕಾಗಿ ಗಂಡನ ತಂದೆ ರಾಮಣ್ಣನ ಮನೆಗೆ ಮಕ್ಕಳ ಜೊತೆಗೆ ಬಂದಿದ್ದಳು.. ಈ ವೇಲೆ ಬೆಳ್ಳಂ ಬೆಳಿಗ್ಗೆ ಮನೆಗೆ ನುಗಿರುವ ಆರೋಪಿ ಮಕ್ಕಳ ಸಮೇತ 6 ಜನರ ಜೀವ ತೆಗೆದಿದ್ದಾನೆ.

ಆರೋಪಿಯನ್ನ ಅರೆಸ್ಟ್ ಮಾಡಿ ಈ ಬಗ್ಗೆ ವಿಚಾರನೆ ನಡೆಸಿದಾಗ ವಿಜಯ್ ಕೃಷ್ಣನ್ ಆತನ ಮಗಳ ಮೇಲೆ 2018ರ ಏಪ್ರಿಲ್ 9 ರಂದು ಅತ್ಯಾಚಾರ ನಡೆಸಿದ್ದ… ಮಗಳಿಗೆ ಮತ್ತು ಬರುವ ಪದಾರ್ಥ ನೀಡಿ ಅತ್ಯಾಚಾರವೆಸಗಿ ಅದರ ಅಶ್ಲೀಲ ಫೋಟೋಗಳನ್ನು ಸೆರೆ ಹಿಡಿದು ದುಡ್ಡಿಗಾಗಿ ಬ್ಲಾಕ್ ಮೇಲ್ ಮಾಡ್ತಿದ್ರು ಎಂದು ಆರೋಪಿಸಿದ್ದಾರೆ. ಅಲ್ಲದೇ ಈ ಬಗ್ಗೆ ಜನವರಿ 31 , 2019ರಲ್ಲಿ ಚಾರ್ಜ್ ಶೀಟ್ ಫೈಲ್ ಮಾಡಲಾಗಿತ್ತು. ಇದರ ಬೆನ್ನಲ್ಲೇ ಉಷಾ ರಾಣಿ ಸಹ ಏಪ್ರಿಲ್ 10 ರಂದು ಪೆಂಡರ್ತಿ ಪೊಲೀಸ್ ಠಾಣೆಯಲ್ಲಿ ಅಪ್ಪಲರಾಜು, ಶ್ರೀನು, ಗೌರೀಶ್ ಹಾಗೂ ಸನ್ಯಾಸಿ ರಾವ್ ವಿರುದ್ಧ ಅಶ್ಲೀಲ ಪದ ಬಳಕೆ, ಗಂಡನ ಕೊಲೆಗೆ ಧಮ್ಕಿ ಹಾಕಿರುವುದಾಗಿ ಆರೋಪಿಸಿ ಪ್ರಕರಣ ದಾಖಲಿಸಿದ್ದಳು.. ಈ ಕೇಸ್ ಇನ್ನೂವರೆಗೂ ವಿಚಾರಣೆಯ ಹಂತದಲ್ಲಿರುವಾಗಲೇ ಅಪ್ಪಲರಾಜು 6 ಜನರ ಜೀವ ತೆಗೆದಿದ್ಧಾನೆ.

ಅಪ್ರಾಪ್ತ ಮಗಳ ಮೇಲೆ ತಮದೆಯಿಂದ ನಿರಂತರ ಅತ್ಯಾಚಾರ – ಮೂಗು ಕಚ್ಚಿ ಹಲ್ಲೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd