ಮಕ್ಕಳ ಮೇಲೆ ದೌರ್ಜನ್ಯವೆಸಗಿ ಅಶ್ಲೀಲವಾಗಿ ನಿಂದಿಸಿದವನಿಗೆ 50 ವರ್ಷ ಜೈಲು

1 min read

ಮಕ್ಕಳ ಮೇಲೆ ದೌರ್ಜನ್ಯವೆಸಗಿ ಅಶ್ಲೀಲವಾಗಿ ನಿಂದಿಸಿದವನಿಗೆ 50 ವರ್ಷ ಜೈಲು

ಅಪ್ರಾಪ್ತ ಮಕ್ಕಳಿಗೆ ಸೇನಾ ನೆಲೆಯಲ್ಲೇ ಅಶ್ಲೀಲವಾಗ ( ಲೈಂಗಿಕವಾಗಿ ) ನಿಂದಿಸಿದ ವ್ಯಕ್ತಿಗೆ ಬರೋಬ್ಬರಿ 50 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಪಡಿಸಲಾಗಿದೆ.. ಅಮೆರಿಕಾದ ಟೆಕ್ಸಾನ್ ಎಲ್ ಪಾಸೋದಲ್ಲಿರುವ ಯುಎಸ್ ಆರ್ಮಿ ಬೇಸ್ ಪ್ರದೇಶದಲ್ಲಿ ಇಂತಹದೊಂದು ಘಟನೆ ನಡೆದಿದೆ..

ಅಪರಾಧಿ ಕಾರ್ಲ್ ಮನ್ರೋ ಗಾರ್ಡ್ (50) ಟೆಕ್ಸಾಸ್ ದೇಶದ ಸೇನಾ ನೆಲೆಯಲ್ಲಿ ವಾಸವಿದ್ದ ಇಬ್ಬರು ಅಪ್ರಾಪ್ತ ಮಕ್ಕಳಿಗೆ ಲೈಂಗಿಕವಾಗಿ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿತ್ತು.

ಗಾರ್ಡನ್ 2018ರ ಕ್ರಿಸ್‌ಮಸ್ ಸಮಯದಲ್ಲಿ ಹಾಗೂ 2019ರ ಜುಲೈನಲ್ಲಿ ಇಬ್ಬರು ಮಕ್ಕಳಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಆತ ಅದೇ ಇಬ್ಬರು ಮಕ್ಕಳ ಮಲತಂದೆಯೂ ಆಗಿದ್ದು, ಮಕ್ಕಳ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂಬುದು ತಿಳಿದುಬಂದಿದೆ.

ಕಾರ್ಲ್ ಮನ್ರೋ ಗಾರ್ಡ್ ಇಂತಹ ಹಲವು ಪ್ರಕರಣಗಳಲ್ಲಿ ತಪ್ಪಿತಸ್ಥನಾಗಿದ್ದಾನೆ ಎಂದು ಫೆಡರಲ್ ತೀರ್ಪುಗಾರರು ತಿಳಿಸಿದ್ದು, ಅಪರಾಧಿಗೆ 50 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd